ಬೆಲೆಯೇರಿಕೆ | ಟೊಮೆಟೋ ಸುತ್ತ ಸರ್ಪಗಾವಲು- ರಾತ್ರಿ ಹೊತ್ತು ಟಾರ್ಚ್ ಹಾಕಿ ಅಡ್ಡಾಡುತ್ತಿರುವ ರೈತರು- ವಿಡಿಯೋ ವೈರಲ್

(ನ್ಯೂಸ್ ಕಡಬ) newskadaba.com ಕೋಲಾರ, ಜು.13.  ದಿನದಿಂದ ದಿನಕ್ಕೆ ಟೊಮ್ಯಾಟೋ ಬೆಲೆ ಗಗನಕ್ಕೇರುತ್ತಿದ್ದು,  ಇದರಿಂದಾಗಿ ಅನೇಕ ಜನರ ಆರ್ಥಿಕತೆಯ ಮೇಲೆ ಹೊಡೆತಬಿದ್ದಿದೆ. ಅಲ್ಲದೇ ಅಡುಗೆಗೆ ಟೊಮ್ಯಾಟೋ ಹಾಕಬೇಕೋ ಬೇಡವೋ ಎಂದು ಯೋಚಿಸುವ ಮಟ್ಟಕ್ಕೆ ತಲುಪಿದೆ. ಅದಾಗ್ಯೂ ಈ ಪರಿಸ್ಥಿತಿಯಲ್ಲಿ ಅಲ್ಲಲ್ಲಿ ಟೊಮ್ಯಾಟೊ ಕಳ್ಳತನ ಪ್ರಕರಣಗಳು ನಡೆಯುತ್ತಲೇ ಇದೆ.

ಬೆಲೆ ಏರಿಕೆಯಿಂದಾಗಿ ರೈತರು ತಮ್ಮ ತೋಟಗಳಲ್ಲಿ ಬೆಳೆದ ಟೊಮೆಟೊ ವನ್ನು ಕಾಪಾಡಿಕೊಳ್ಳಲು ಹರಸಾಹಸ ಪಡುತ್ತಿದ್ದು, ಹಗಲು ರಾತ್ರಿಯೆನ್ನದೇ ಗಿಡದ ಬಳಿಯೇ ಮಲಗುತ್ತಿದ್ದಾರೆ. ಆದರೂ ಕಳ್ಳರ ಕಾಟದಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.

Also Read  ಗುಂಡ್ಯ: ಕಾರಿನ ಮೇಲೆ ಬಿದ್ದ ಕಂಟೇನರ್ ಲಾರಿ - ಕಾರು ಸಂಪೂರ್ಣ ನಜ್ಜುಗುಜ್ಜು

ಇತ್ತೀಚೆಗೆ ಹಾಸನ ಜಿಲ್ಲೆಯಲ್ಲಿ ಓರ್ವ ರೈತನ ಜಮೀನಿನಲ್ಲಿ ಬೆಳೆಯಲಾಗಿದ್ದ 2.5 ಲಕ್ಷ ರೂಪಾಯಿ ಮೌಲ್ಯದ ಟೊಮೆಟೋ ಕಳ್ಳತನವಾಗಿತ್ತು. ಇದೀಗ ಕೋಲಾರದಲ್ಲಿ ಟೊಮ್ಯಾಟೊ ಬೆಳೆಗಾರರು ಕಳ್ಳಕಾಕರಿಂದ ರಕ್ಷಿಸಿಕೊಳ್ಳಲು ರಾತ್ರಿ ಹೊತ್ತು ಟಾರ್ಚ್ ಲೈಟ್ ಹಾಕಿಕೊಂಡು ಗಸ್ತು ತಿರುಗುತ್ತಿದ್ದಾರೆ. ರಾತ್ರಿ ಹೊತ್ತು ಕಳ್ಳರ ಕಾಟ ಹೆಚ್ಚಿರುವುದರಿಂದ ರೈತರು ರಾತ್ರಿ ವೇಳೆ ತಮ್ಮ ಜಮೀನು ಕಾಯಬೇಕಾದ ಪರಿಸ್ಥಿತಿ ಬಂದಿದೆ. ರೈತರು ರಾತ್ರಿ ಹೊತ್ತು ಟಾರ್ಚ್ ಹಾಕಿಕೊಂಡು ಟೊಮೆಟೋ ಕಾಯುವ ದೃಶ್ಯ ವೈರಲ್ ಆಗಿದೆ.

error: Content is protected !!
Scroll to Top