ಅಪ್ರಾಪ್ತ ಬಾಲಕಿಯ ಸಮ್ಮತಿಯ ಲೈಂಗಿಕತೆ ಅತ್ಯಾಚಾರವಲ್ಲ- ಹೈಕೋರ್ಟ್

(ನ್ಯೂಸ್ ಕಡಬ) newskadaba.com ಒರಿಸ್ಸಾ, ಜು. 12. ಬಾಲಕಿ ಅಪ್ರಾಪ್ತೆಯಾಗಿದ್ದು ಆಕೆಯ ಸಮ್ಮತಿ ಮೇರೆಗೆ ಲೈಂಗಿಕ ಕ್ರಿಯೆ ನಡೆದರೆ ಅದು ಅತ್ಯಾಚಾರವಾಗಲ್ಲ ಎಂದು ಒರಿಸ್ಸಾ ಹೈಕೋರ್ಟ್ ಹೇಳಿದೆ. 45 ವರ್ಷದ ವ್ಯಕ್ತಿಯೋರ್ವ ಅಪ್ರಾಪ್ತೆಗೆ ಅತ್ಯಾಚಾರವೆಸಗಿದ ಆರೋಪದಡಿಯಲ್ಲಿ ಸುಮಾರು 10 ವರ್ಷಗಳಿಂದ ಜೈಲುಶಿಕ್ಷೆ ಅನುಭವಿಸುತ್ತಿದ್ದ ಆತನನ್ನು ಇತ್ತೀಚೆಗೆ ಒರಿಸ್ಸಾ ಹೈಕೋರ್ಟ್ ಖುಲಾಸೆಗೊಳಿಸಿ, ಈ ಆದೇಶ ಹೊರಡಿಸಿದೆ.

ಪ್ರಕರಣದ ದಾಖಲೆಗಳ ಪ್ರಕಾರ, ವರ್ಷಗಳ ಹಿಂದೆ 17 ವರ್ಷದ ಅಪ್ರಾಪ್ತ ಹುಡುಗಿ ಆರೋಪಿ 4 ಮಕ್ಕಳ ತಂದೆಯೊಂದಿಗೆ ಕಾಡಿಗೆ ಹೋಗುತ್ತಿದ್ದು, ಮತ್ತು ಆತನೊಂದಿಗೆ ಲೈಂಗಿಕ ಕ್ರಿಯೆ ನಡೆಸುತ್ತಿದ್ದಳು. ಆತ ವಿವಾಹಿತ ಎಂದು ಆಕೆಗೆ ಚೆನ್ನಾಗಿ ತಿಳಿದಿತ್ತು. ಆಕೆ ಈ ಕೃತ್ಯದ ಬಗ್ಗೆ ಯಾವುದೇ ಆಕ್ಷೇಪಣೆಯನ್ನು ಎತ್ತಲಿಲ್ಲ ಅಥವಾ ಗರ್ಭಿಣಿಯಾಗುವವರೆಗೆ ಈ ಬಗ್ಗೆ ಯಾರ ಬಳಿಯೂ ಬಹಿರಂಗಪಡಿಸಲಿಲ್ಲ. ಆರೋಪಿಯು ಅವಳನ್ನ ಮದುವೆಯಾಗುವುದಾಗಿ ಯಾವುದೇ ಭರವಸೆ ನೀಡಲಿಲ್ಲ. ಆರೋಪಿಯು ವಿವಾಹಿತನಾಗಿರುವುದರಿಂದ ಆತನೊಂದಿಗೆ ಮದುವೆ ಸಾಧ್ಯವಿಲ್ಲ ಎಂದು ಆಕೆಗೂ ತಿಳಿದಿತ್ತು ಎಂದು ನ್ಯಾಯಮೂರ್ತಿ ತಮ್ಮ ಜುಲೈ 5ರ ತೀರ್ಪಿನಲ್ಲಿ ಹೇಳಿದ್ದಾರೆ ಎನ್ನಲಾಗಿದೆ.

Also Read  ಯಶಸ್ವಿ 'ಆಪರೇಷನ್ ಚೀತಾ' ಕಾರ್ಯಾಚರಣೆಗೆ ಊರವರ ಸಾಥ್ ➤ ಬಾವಿಯಿಂದ ಬೋನಿಗೆ ಬಿದ್ದ ಚಿರತೆ

error: Content is protected !!
Scroll to Top