ಪ್ರಯಾಣಿಕರ ಗಮನಕ್ಕೆ; ಕುಕ್ಕೇ ಸುಬ್ರಹ್ಮಣ್ಯ- ಯಶವಂತಪುರ ರೈಲು ವೇಳಾಪಟ್ಟಿಯಲ್ಲಿ ಪರಿಷ್ಕರಣೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜು. 12.‌ ರೈಲಿನ ಮೂಲಕ ದ.ಕ. ಜಿಲ್ಲೆಯ ಕುಕ್ಕೇ ಸುಬ್ರಹ್ಮಣ್ಯ ಮತ್ತು ಧರ್ಮಸ್ಥಳಕ್ಕೆ ಹೋಗುವ ಭಕ್ತರಿಗೆ ಜುಲೈ 17ರಿಂದ ಅನ್ವಯವಾಗುವಂತೆ ಮಂಗಳೂರು ಜಂಕ್ಷನ್- ಯಶವಂತಪುರ ಎಕ್ಸ್‌ಪ್ರೆಸ್ ರೈಲಿನ ವೇಳಾಪಟ್ಟಿಯನ್ನು ಪರಿಷ್ಕರಣೆ ಮಾಡಿ, ನೈಋತ್ಯ ರೈಲ್ವೇ ಈ ಕುರಿತು ಆದೇಶ ಹೊರಡಿಸಿದೆ. ರೈಲು ಸಂಖ್ಯೆ 16540 ವೇಳಾಪಟ್ಟಿಯನ್ನು ಪರಿಷ್ಕರಣೆ ಮಾಡಲಾಗಿದ್ದು, ಇದು ರಾಜಧಾನಿ ಬೆಂಗಳೂರು ಮತ್ತು ಕರ್ನಾಟಕದ ಕರಾವಳಿಯನ್ನು ಸಂಪರ್ಕಿಸುತ್ತದೆ. ಈ ರೈಲು ಹಾಸನ, ಸಕಲೇಶಪುರ, ಚನ್ನರಾಯಪಟ್ಟಣ, ಶ್ರವಣಬೆಳಗೊಳ, ಯಡಿಯೂರು, ಕುಣಿಗಲ್, ನೆಲಮಂಗಲ, ಚಿಕ್ಕಬಾಣಾವರ ಮೂಲಕ ಸಂಚಾರ ನಡೆಸುತ್ತದೆ. ಪ್ರಮುಖವಾಗಿ ಬೆಂಗಳೂರು-ಮಂಗಳೂರು ನಡುವೆ ಸಂಚಾರ ನಡೆಸುವ ಜನರಿಗೆ ಸಹಾಯಕವಾಗಿದೆ.

ಹೊಸ ವೇಳಾಪಟ್ಟಿ; ನೈಋತ್ಯ ರೈಲ್ವೆಯ ಆದೇಶದಂತೆ ಪರಿಷ್ಕೃತ ವೇಳಾಪಟ್ಟಿಯ ಪ್ರಕಾರ, ರೈಲು ಸಂಖ್ಯೆ 16540 ಮಂಗಳೂರು ಜಂಕ್ಷನ್‌ನಿಂದ ಬೆಳಗ್ಗೆ 7 ಗಂಟೆಗೆ ಹೊರಡಲಿದೆ. ಸಂಜೆ 4.30ಕ್ಕೆ ಯಶವಂತಪುರವನ್ನು ತಲುಪಲಿದೆ. ಜುಲೈ 17ರಿಂದಲೇ ಜಾರಿಗೆ ಬರುವಂತೆ ರೈಲಿನ ವೇಳಾಪಟ್ಟಿಯನ್ನು ಪರಿಷ್ಕರಣೆ ಮಾಡಲಾಗಿದೆ.

Also Read  ಭಾರತೀಯ ರೈಲ್ವೇ ಇಲಾಖೆಯಲ್ಲಿ TTE ಹುದ್ದೆ - ಅರ್ಜಿ ಆಹ್ವಾನ

ರೈಲು ಬೆಳಗ್ಗೆ 7ಗಂಟೆ ಮಂಗಳೂರು ಜಂಕ್ಷನ್‌ನಿಂದ ಹೊರಟು ಬಂಟ್ವಾಳ (7.33 ರಿಂದ 7.35), ಕಬಕ ಪುತ್ತೂರು (8.20 ರಿಂದ 8.22), ಸುಬ್ರಮಣ್ಯ ರೋಡ್ (9 ರಿಂದ 9.10)ಕ್ಕೆ ಆಗಮಿಸಲಿದೆ ಎಂದು ಪ್ರಕಟಣೆ ಹೇಳಿದೆ.

ಸುಬ್ರಹ್ಮಣ್ಯ ರೋಡ್‌ನಿಂದ ಹೊರಡುವ ರೈಲು ಸಕಲೇಶಪುರ (11.30 ರಿಂದ 11.40), ಹಾಸನ (12.40 ರಿಂದ 12.45), ಚನ್ನರಾಯಪಟ್ಟಣ (1.10 ರಿಂದ 1.11), ಶವಣಬೆಳಗೊಳ (1.22 ರಿಂದ 1.23), ಬಿ. ಜಿ. ನಗರ (1.47 ರಿಂದ 1.48) ತಲಪಲಿದೆ.

ಯಡಿಯೂರು (2.01 ರಿಂದ 2.02), ಕುಣಿಗಲ್ (2.18 ರಿಂದ 2.19), ನೆಲಮಂಗಲ (3 ರಿಂದ 3.01), ಚಿಕ್ಕಬಣಾವರ (3.44 ರಿಂದ 3.45)ಕ್ಕೆ ತಲುಪಲಿದೆ. ಯಶವಂತಪುರ ನಿಲ್ದಾಣಕ್ಕೆ 4.30ಕ್ಕೆ ಆಗಮಿಸಲಿದೆ. ರೈಲಿನ ಪ್ರಯಾಣಿಕರು ಬದಲಾವಣೆಗಳನ್ನು ಗಮನಿಸಿ ಈ ರೈಲು ಸೇವೆಯ ಉಪಯೋಗ ಬಳಸಿಕೊಳ್ಳುವಂತೆ ಮನವಿ ಮಾಡಲಾಗಿದೆ.

Also Read  ಮಂಗಳೂರು: ನೂತನ ಸಚಿವ ಎಸ್.ಅಂಗಾರಗೆ ವಿಮಾನ ನಿಲ್ದಾಣದಲ್ಲಿ ಭವ್ಯ ಸ್ವಾಗತ

error: Content is protected !!
Scroll to Top