ಟ್ರೋಲ್ ಪೇಜ್ ಮೂಲಕ ಸಂಘಟನೆಯ ವಿರುದ್ದ ಮಾನಹಾನಿಕರ ಪೋಸ್ಟ್- ಬಜರಂಗದಳದಿಂದ ದೂರು

(ನ್ಯೂಸ್ ಕಡಬ) newskadaba.com ಮಂಗಳೂರು, ಜು. 12. ನಿರಂತರವಾಗಿ ‘ಕರಾವಳಿ ರಶೀದ್’ ಎಂಬ ಟ್ರೋಲ್ ಪೇಜ್ ಮುಖಾಂತರ ಬಜರಂಗದಳದ ಕುರಿತು ಅಶ್ಲೀಲ, ಮಾನಹಾನಿಕರ ಸುಳ್ಳು ಸುದ್ದಿ ಮತ್ತು ವೀಡಿಯೊಗಳನ್ನು ಹಂಚಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿ ಬಜರಂಗದಳ ಜಿಲ್ಲಾ ಘಟಕದ ಸಂಚಾಲಕ ನವೀನ್‌ ಮೂಡುಶೆಡ್ಡೆಯವರು ಮಂಗಳವಾರದಂದು ದೂರು ನೀಡಿದ್ದಾರೆ.

ದೂರಿನ ಪ್ರಕಾರ ‘ಬಜರಂಗದಳ ಸಂಘಟನೆಯನ್ನು ಅವಮಾನ ಮಾಡುವುದಲ್ಲದೇ, ಮುಖಂಡರಾದ ಶರಣ್‌ ಪಂಪ್‌ವೆಲ್‌ ಭಾವಚಿತ್ರವನ್ನು ಅಶ್ಲೀಲವಾಗಿ ಎಡಿಟ್‌ ಮಾಡಿ ಅವರ ಮಾನಹಾನಿ ಮಾಡಲಾಗುತ್ತಿದೆ. ಇದು ಹಿಂದೂ- ಮುಸ್ಲಿಮರ ನಡುವೆ ದ್ವೇಷ ಬಿತ್ತುವ ಉದ್ದೇಶದಿಂದ ಮಾಡುತ್ತಿರುವ ವ್ಯವಸ್ಥಿತ ಷಡ್ಯಂತ್ರ. ಬಜರಂಗದಳ ಮತ್ತು ಅದರ ನಾಯಕರ ಚಾರಿತ್ರ್ಯದ ಬಗ್ಗೆ ತಪ್ಪು ಅಭಿಪ್ರಾಯ ಮೂಡಿಸಿ, ಹಿಂದು ಮುಸಲ್ಮಾನರ ನಡುವೆ ಸಂಘರ್ಷ ಸೃಷ್ಟಿಸಲು ಈ ರೀತಿ ಮಾಡುತ್ತಿದ್ದಾರೆ’ ಎಂದು ಆರೋಪಿಸಲಾಗಿದೆ.

Also Read  ಯುವಕನೋರ್ವನಿಗೆ ಅಪರಿಚಿತ ತಂಡದಿಂದ ಹಲ್ಲೆ - ದೂರು ದಾಖಲು


ಪ್ರಕರಣಕ್ಕೆ ಸಂಬಂಧಿಸಿ ಕರಾವಳಿ ರಶೀದ್‌ ಟ್ರೋಲ್‌ ಪೇಜ್‌ನ ಎಡ್ಮಿನ್‌ ಮತ್ತು ತಿರುಚಿದ ವಿಡಿಯೊ ಹಂಚಿಕೊಳ್ಳುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.

error: Content is protected !!
Scroll to Top