ಏರೋನಿಕ್ಸ್ ಕಂಪನಿ ಸಿಇಒ ಮತ್ತು ಎಂಡಿ ಹತ್ಯೆ ಪ್ರಕರಣ- ಮೂವರ ಬಂಧನ

(ನ್ಯೂಸ್ ಕಡಬ) newskadaba.com ಬೆಂಗಳೂರು, ಜು. 12. ಏರೋನಿಕ್ಸ್ ಇಂಟರ್ನೆಟ್ ಕಂಪನಿಯ ಎಂಡಿ ಹಾಗೂ ಸಿಇಒ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬೆಂಗಳೂರಿನ ಅಮೃತಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಫಿಲೆಕ್ಸ್​, ವಿನಯ್​ ರೆಡ್ಡಿ, ಸಂತೋಷ್ ಎಂದು ಗುರುತಿಸಲಾಗಿದೆ. ಏರೋನಿಕ್ಸ್ ಮೀಡಿಯಾ ಪ್ರೈ. ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಫಣೀಂದ್ರ ಸುಬ್ರಹ್ಮಣ್ಯ ಮತ್ತು ಅದೇ ಕಂಪೆನಿಯಲ್ಲಿ ಕಾರ್ಯನಿರ್ವಹಣಾಧಿಕಾರಿಯಾಗಿದ್ದ ವಿನು ಕುಮಾರ್ ಅವರನ್ನು ಮಂಗಳವಾರದಂದು ಸಂಜೆ 4 ಗಂಟೆ ಸುಮಾರಿಗೆ ಮಾರಕಾಸ್ತ್ರಗಳೊಂದಿಗೆ ಅಮೃತಹಳ್ಳಿಯಲ್ಲಿರುವ ಕಂಪೆನಿ ಕಚೇರಿಗೆ ನುಗ್ಗಿದ ಆರೋಪಿಗಳು ಹಲ್ಲೆ ನಡೆಸಿ, ಹತ್ಯೆಗೈದಿದ್ದರು. ಆನಂತರ, ಮತ್ತೊಂದು ಮಹಡಿ ಮೂಲಕ ಪರಾರಿಯಾಗಿದ್ದರು.

Also Read  ಮೇಲ್ಸೇತುವೆಯಿಂದ ಸ್ಕೂಟರ್ ಎಸೆತ       ಆರೋಪಿಗಳ ವಿರುದ್ಧ ಪ್ರಕರಣ ದಾಖಲು..!       

error: Content is protected !!
Scroll to Top