ಫ್ಲೈಓವರ್ ಬಳಿ ಮಹಿಳೆಯ ತುಂಡು ತುಂಡಾದ ದೇಹದ ಭಾಗಗಳು ಪತ್ತೆ- ತನಿಖೆ ಚುರುಕು

(ನ್ಯೂಸ್ ಕಡಬ) newskadaba.com ನವದೆಹಲಿ, ಜು. 12. ದೇಶವನ್ನೇ ಬೆಚ್ಚಿ ಬೀಳಿಸಿದ್ದ ಶ್ರದ್ಧಾ ವಾಕರ್ ಭೀಕರ ಹತ್ಯೆ ಪ್ರಕರಣ ಮಾಸುವ ಮುನ್ನವೇ ದೆಹಲಿಯಲ್ಲಿ ಇದಕ್ಕೆ ಹೋಲುವಂತೆಯೇ ಮತ್ತೊಂದು ಘಟನೆ ನಡೆದಿದ್ದು, ಮಹಿಳೆಯೊಬ್ಬರ ತುಂಡು-ತುಂಡಾದ ದೇಹವು ಗೀತಾ ಫ್ಲೈಓವರ್ ಬಳಿ ದೆಹಲಿ ಪೊಲೀಸರು ಪತ್ತೆಹಚ್ಚಿದ್ದಾರೆ.

ಸದ್ಯ ದೇಹದ ತುಂಡುಗಳನ್ನು ವಶಕ್ಕೆ ಪಡೆದಿರುವ ಪೊಲೀಸರು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದು, ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ಕಳೆದ ವರ್ಷ ದೇಶವನ್ನೇ ಬೆಚ್ಚಿ ಬೀಳಿಸಿದ್ದ ಶ್ರದ್ಧಾ ವಾಕರ್ ಳನ್ನು ಲಿವ್ ಇನ್​ ರಿಲೇಷನ್ ಶಿಪ್ ಸಂಗಾತಿಯಾಗಿದ್ದ ಅಫ್ತಾಬ್ ಪೂನಾವಾಲಾ ಎಂಬಾತ ಕತ್ತು ಹಿಸುಕಿ ಕೊಲೆಗೈದು ದೇಹವನ್ನು 35 ತುಂಡುಗಳಾಗಿ ಕತ್ತರಿಸಿ 18 ದಿನಗಳ ಕಾಲ ಫ್ರಿಡ್ಜ್​ ನಲ್ಲಿ ಶೇಖರಿಸಿಟ್ಟು ನಗರದ ವಿವಿಧೆಡೆ ಎಸೆದು ಬಂದಿದ್ದ. ಇದೀಗ ಅಂತಹದೇ ಘಟನೆ ಮತ್ತೊಮ್ಮೆ ಮರುಕಳಿಸಿದೆ.

Also Read  ವಿದೇಶದಿಂದ ಅಕ್ರಮವಾಗಿ ಇ-ಸಿಗರೇಟ್ ಸಾಗಾಟ - ಇಬ್ಬರನ್ನು ವಶಕ್ಕೆ ಪಡೆದ ಕಸ್ಟಮ್ಸ್ ಅಧಿಕಾರಿಗಳು

error: Content is protected !!
Scroll to Top