ಹಾಸಿಗೆ ತಯಾರಿಕಾ ಫ್ಯಾಕ್ಟರಿಗೆ ಬೆಂಕಿ- ಲಕ್ಷಾಂತರ ರೂ. ನಷ್ಟ

(ನ್ಯೂಸ್ ಕಡಬ) newskadaba.com ಬಂಟ್ವಾಳ, ಜು 12. ತಲೆದಿಂಬು ಹಾಗೂ ಹಾಸಿಗೆ ತಯಾರಿಕಾ ಪ್ಯಾಕ್ಟರಿಯೊಂದಕ್ಕೆ ಬೆಂಕಿ ತಗುಲಿದ ಪರಿಣಾಮ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದ ಘಟನೆ ಸಜೀಪ ಗ್ರಾಮದ ಆಲಾಡಿ ಸಮೀಪದ ಮುಂಡಕೋಡಿನಲ್ಲಿ ನಡೆದಿದೆ.

ಸಜಿಪ ನಿವಾಸಿ ಲತೀಫ್ ಎಂಬವರಿಗೆ ಸೇರಿದ ಪ್ಯಾಕ್ಟರಿ ಇದಾಗಿದ್ದು, ಈ ಪ್ಯಾಕ್ಟರಿಯಲ್ಲಿ ಲಕ್ಷಾಂತರ ರೂ. ಮೌಲ್ಯದ ಮೆಷಿನರಿಗಳು, ತಲೆದಿಂಬು ಹಾಗೂ ಹಾಸಿಗೆಗಳು ಇದ್ದವು ಎಂದೆನ್ನಲಾಗಿದೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿಗಳು ಭೇಟಿ ನೀಡಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ.

Also Read  ಫೆಬ್ರವರಿ 26, 27 ಬೃಹತ್ ಉದ್ಯೋಗ ಮೇಳ; ವಿಕಲಚೇತನರ ನೋಂದಣಿಗೆ ವಿಶೇಷ ವೆಬ್ ಸೈಟ್

error: Content is protected !!
Scroll to Top