(ನ್ಯೂಸ್ ಕಡಬ) newskadaba.com ಮಂಗಳೂರು, ಜು. 12. ಕರ್ನಾಟಕ ಕುಕ್ಕುಟ ಮತ್ತು ಜಾನುವಾರು ಆಹಾರ (ತಯಾರಿಕೆ ಮತ್ತು ಮಾರಾಟ ನಿಯಂತ್ರಣ) ಆಜ್ಞೆ 1987ರ ಪ್ರಕಾರ ಕುಕ್ಕುಟ ಮತ್ತು ಜಾನುವಾರು ಆಹಾರ ಉತ್ಪಾದಕರು, ವಿತರಕರು ಮತ್ತು ಮಾರಾಟಗಾರರು ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯಿಂದ ಪರವಾನಗಿ ಪಡೆಯುವುದು ಮತ್ತು ನವೀಕರಿಸಿಕೊಳ್ಳುವುದು ಕಡ್ಡಾಯ.
ಕುಕ್ಕುಟ ಮತ್ತು ಪಶು ಆಹಾರ ಉತ್ಪಾದನೆ, ಮಾರಾಟ, ವಿತರಣೆ ವ್ಯವಹಾರದಲ್ಲಿ ತೊಡಗಿರುವವರು ಕೂಡಲೇ ಸ್ಥಳೀಯ ಪಶುವೈದ್ಯ ಅಧಿಕಾರಿಗಳು ಹಾಗೂ ಸಹಾಯಕ ಕುಕ್ಕುಟ/ಪಶು ಆಹಾರ ಗುಣನಿಯಂತ್ರಣಾಧಿಕಾರಿಯನ್ನು ಸಂಪರ್ಕಿಸಿ ಸೇವಾಸಿಂಧು ಜಾಲತಾಣ www.sevasindhuservices.karnataka.gov.in ಮೂಲಕ ಅರ್ಜಿ ಸಲ್ಲಿಸಿ, ಪರವಾನಗಿ ಪಡೆಯಬಹುದು ಅಥವಾ ನವೀಕರಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗೆ ಪಶುಪಾಲನಾ ಇಲಾಖೆಯ ಮುಖ್ಯ ಪಶುವೈದ್ಯ ಅಧಿಕಾರಿಗಳು (ಆಡಳಿತ), ಮಂಗಳೂರು ದೂ.ಸಂಖ್ಯೆ:9243306956, ಉಳ್ಳಾಲ ದೂ.ಸಂಖ್ಯೆ: 9019198507, ಮುಲ್ಕಿ ದೂ.ಸಂಖ್ಯೆ: 8971024282, ಮೂಡಬಿದ್ರೆ ದೂ.ಸಂಖ್ಯೆ: 7204271943, ಬಂಟ್ವಾಳ ದೂ.ಸಂಖ್ಯೆ: 9481445365, ಬೆಳ್ತಂಗಡಿ ದೂ.ಸಂಖ್ಯೆ: 9448533922, ಪುತ್ತೂರು ದೂ.ಸಂಖ್ಯೆ -9448624950, ಕಡಬ ದೂ.ಸಂಖ್ಯೆ:9483922594, ಸುಳ್ಯ ದೂ.ಸಂಖ್ಯೆ 9844995078 ಅವರನ್ನು ಸಂಪರ್ಕಿಸುವಂತೆ ಪಶುಪಾಲನಾ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.