ತಾರಸಿ ತೋಟದ ಕುರಿತು ಜು.15ರಂದು ಉಚಿತ ತರಬೇತಿ

(ನ್ಯೂಸ್ ಕಡಬ) newskadaba.com ಮಂಗಳೂರು,  ಜು. 12.  ವಿಜಯ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನ (ರಿ) (ಸಂಯೋಜಕರು:ಬ್ಯಾಂಕ್ ಆಫ್ ಬರೋಡ) ಹಾಗೂ ಸಿರಿ ತೋಟಗಾರಿಕೆ ಸಂಘದ (ರಿ) ಜಂಟಿ ಸಹಯೋಗದಲ್ಲಿ ಇದೇ ಜು.15ರ ಗುರುವಾರದಂದು ಬೆಳಿಗ್ಗೆ 10 ಗಂಟೆಯಿಂದ ತಾರಸಿ ತೋಟ, ಕೈತೋಟ ಮತ್ತು ಗ್ರಾಪ್ಟಿಂಗ್ ಕುರಿತು ಉಚಿತ ತರಬೇತಿ ನಗರದ ಜ್ಯೋತಿ ಸರ್ಕಲ್ ಬಳಿಯಿರುವ ಬ್ಯಾಂಕ್ ಆಫ್ ಬರೋಡ ಬಿಲ್ಡಿಂಗ್ ನ, 5ನೇ ಮಹಡಿಯಲ್ಲಿರುವ, ವಿಜಯ ಟವರ್ಸ್ ನಲ್ಲಿ ನಡೆಯಲಿದೆ.

ಆಸಕ್ತರು ಜು.14ರೊಳಗೆ ನಗರದ ಬೆಂದೂರ್‍ವೆಲ್ ನಲ್ಲಿರುವ ಸಿರಿ ತೋಟಗಾರಿಕೆ ಸಂಘದಲ್ಲಿ ಹೆಸರು ನೋಂದಾಯಿಸಬಹುದು. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ: 9845523944 ಅನ್ನು ಸಂಪರ್ಕಿಸುವಂತೆ ಹಿರಿಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Also Read  ಪುತ್ತೂರು: ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಸಾಮೂಹಿಕ ಪ್ರತಿಭಟನೆ

error: Content is protected !!
Scroll to Top