ಜು. 21ರಂದು ತೆರೆಗೆ ಬರಲಿದೆ “ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ”

(ನ್ಯೂಸ್ ಕಡಬ) newskadaba.com ಬೆಂಗಳೂರು, ಜು. 12. ನಿತಿನ್ ಕೃಷ್ಣಮೂರ್ತಿ ನಿರ್ದೇಶನದ, ನಟ ರಕ್ಷಿತ್ ಶೆಟ್ಟಿ ನಟಿಸಿರುವ  ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಸಿನೆಮಾ ಇದೇ ಜುಲೈ 21ಕ್ಕೆ ಬಿಡುಗಡೆಗೆ ಸಿದ್ದವಾಗಿದ್ದು, ಈ ಸಿನಿಮಾದ ವಿಶೇಷತೆ ಏನೆಂದರೆ ಹೊಸ ಕಲಾವಿದರ ಜೊತೆಗೆ ರಮ್ಯಾ, ದಿಗಂತ್‌ ಮಂಚಾಲೆ, ಪವನ್‌ ಕುಮಾರ್‌ ಹಾಗೂ ರಿಷಬ್‌ ಶೆಟ್ಟಿ ಕಾಣಿಸಿಕೊಂಡಿದ್ದಾರೆ. ನಟ ರಕ್ಷಿತ್‌ ಶೆಟ್ಟಿ ಈ ಸಿನಿಮಾದ ಟ್ರೈಲರ್‌ ಮಂಗಳವಾರದಂದು ಬಿಡುಗಡೆ ಮಾಡಿದ್ದು ಪ್ರೇಕ್ಷಕರಲ್ಲಿ ಇನ್ನಷ್ಟು ನಿರೀಕ್ಷೆ ಹೆಚ್ಚಿಸುವಂತೆ ಮಾಡಿದೆ. ಹಾಗೆಯೇ ಇದೇ ತಿಂಗಳು 21ಕ್ಕೆ ಸಿನಿಮಾ ಬಿಡುಗಡೆಯಾಗಲಿದ್ದು, ಸಿನಿಪ್ರೇಕ್ಷಕರು ಕಾತರದಿಂದ ಕಾಯುತ್ತಿದ್ದಾರೆ.

ಹಾಸ್ಟೆಲ್‌ ಹುಡುಗರು ಟ್ರೈಲರ್‌ ರಿಲೀಸ್‌ ಮಾಡಿರುವ ರಕ್ಷಿತ್‌ ಶೆಟ್ಟಿಯವರು ಈ ಸಿನಿಮಾವನ್ನು ಎರಡು ಬಾರಿ ನೋಡಿದ್ದಲ್ಲದೆ, ಸಿನಿಮಾ ರಿಲೀಸ್‌ಗೂ ಮುನ್ನ ಪ್ರೀಮಿಯರ್‌ ಶೋ ಬಿಡುಗಡೆಯಾಗಲಿದ್ದು, ಮತ್ತೊಮ್ಮೆ ನೋಡುವುದಾಗಿ ನಟ ರಕ್ಷಿತ್‌ ಶೆಟ್ಟಿ ಹೇಳಿರುವುದಾಗಿ ವರದಿಯಾಗಿದೆ.

Also Read  ನಟಿ ಅಮೂಲ್ಯ ಸಹೋದರ, ಚಿತ್ರ ನಿರ್ದೇಶಕ ದೀಪಕ್ ಅರಸ್ ನಿಧನ

ತುಂಬಾ ಕಾಮಿಡಿ ದೃಶ್ಯಗಳನ್ನು ಒಳಗೊಂಡ ಈ ಸಿನಿಮಾ ಸಿನಿಪ್ರಿಯರಿಗೆ ನಿರಾಸೆಗೊಳಿಸಲ್ಲ. ಹಾಗೆಯೇ ಈ ಸಿನಿಮಾವು ಫ್ಯಾಮಿಲಿ ಹಾಗೂ ಕಾಲೇಜಿ ಹುಡುಗರು ಕೂಡ ನೋಡಬಹುದಾದ ಸಿನಿಮಾವಾಗಿ ತೆರೆ ಕಾಣಲಿದೆ. ಹಲವು ರಂಗಭೂಮಿ ಪ್ರತಿಭೆಗಳು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಇವರ ಜೊತೆಗೆ ಸ್ಯಾಂಡಲ್ ವುಡ್ ಸ್ಟಾರ್ ನಟರ ಗೆಸ್ಟ್ ಅಪಿಯರೆನ್ಸ್ ಕೂಡ ಈ ಸಿನಿಮಾದಲ್ಲಿರಲಿದೆ. ಈ ಸಿನಿಮಾ ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ, ಅರವಿಂದ್ ಕಶ್ಯಪ್ ಅವರ ಛಾಯಾಗ್ರಹಣ, ಹಾಗೂ ಸುರೇಶ್ ಅವರ ಸಂಕಲನದಲ್ಲಿ ಮೂಡಿಬರಲಿದೆ.

error: Content is protected !!
Scroll to Top