ಸುಳ್ಯ ಆರ್ ಐ ಆಗಿ ಅವಿನ್ ರಂಗತ್ತಮಲೆ ವರ್ಗಾವಣೆ

(ನ್ಯೂಸ್ ಕಡಬ) newskadaba.com ಸುಳ್ಯ, ಜು. 12. ಸುಳ್ಯ ಹೋಬಳಿಯ ಕಂದಾಯ ನಿರೀಕ್ಷಕರಾಗಿದ್ದ ಅವಿನ್ ರಂಗತ್ತಮಲೆ ಅವರನ್ನು ವರ್ಗಾವಣೆ ಮಾಡಿ ಸರಕಾರ ಆದೇಶ ಹೊರಡಿಸಿದೆ.

ಸುಳ್ಯ ಆರ್‌ಐ ಆಗಿದ್ದ ಕೊರಗಪ್ಪ ಹೆಗ್ಡೆ ಅವರನ್ನು ಬೆಳ್ತಂಗಡಿಗೆ ವರ್ಗಾವಣೆ ಮಾಡಲಾಗಿದೆ. ಬೆಳ್ತಂಗಡಿ ತಾಲೂಕು ಕಚೇರಿಯಲ್ಲಿ ಚುನಾವಣಾ ಶಾಖೆಯಲ್ಲಿ ಕರ್ತವ್ಯದಲ್ಲಿದ್ದ ಅವಿನ್ ಅವರನ್ನು ಸುಳ್ಯ ಹೋಬಳಿಯ ಕಂದಾಯ ನಿರೀಕ್ಷಕರಾಗಿ ವರ್ಗಾವಣೆ ಮಾಡಲಾಗಿದೆ.

ಅವಿನ್ ರಂಗತ್ತಮಲೆ ಅವರು ಬೆಳ್ತಂಗಡಿ ತಾಲೂಕು ಕಚೇರಿಯಲ್ಲಿ ದ್ವಿತೀಯ ದರ್ಜೆ‌ ಸಹಾಯಕರಾಗಿ ಸರಕಾರಿ ಸೇವೆ ಆರಂಭಿಸಿ ಬಳಿಕ ಗ್ರಾಮ ಕರಣಿಕರಾಗಿ ಸುಳ್ಯ ತಾಲೂಕಿನ ಮರ್ಕಂಜ, ಉಬರಡ್ಕ, ಅಜ್ಜಾವರ, ಮಂಡೆಕೋಲು, ಜಾಲ್ಸೂರು ಗ್ರಾಮಗಳಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಬಳಿಕ ಭಡ್ತಿ ಹೊಂದಿ ಪುತ್ತೂರು ಎಸಿ ಕಚೇರಿಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ಸುಳ್ಯ ಹಾಗೂ ಕಡಬ ಕಂದಾಯ ನಿರೀಕ್ಷಕರಾಗಿ ಕಾರ್ಯನಿರ್ವಹಿಸಿದ್ದರು.

Also Read  ಸುಳ್ಯ: ಡಬಲ್‌ ಮರ್ಡರ್ ಪ್ರಕರಣ ► ಆರೋಪಿಗೆ 10 ವರ್ಷ ಜೈಲು

error: Content is protected !!
Scroll to Top