ಕೊಳೆತ ಸ್ಥಿತಿಯಲ್ಲಿ‌ ಖ್ಯಾತ ವಕೀಲರ ಮೃತದೇಹ ಪತ್ತೆ..!

(ನ್ಯೂಸ್ ಕಡಬ) newskadaba.com ಮಂಗಳೂರು, ಜು. 12. ಖ್ಯಾತ ನ್ಯಾಯವಾದಿಯೊಬ್ಬರ ಮೃತದೇಹವು ಕೊಳೆತ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಮಂಗಳವಾರದಂದು ಮಂಗಳೂರಿನಲ್ಲಿ ನಡೆದಿದೆ.


ಮೃತರನ್ನು ನಗರದ ಖ್ಯಾತ ನ್ಯಾಯವಾದಿ ಬಿ.ಹರೀಶ್ ಆಚಾರ್ಯ (60) ಎಂದು ಗುರುತಿಸಲಾಗಿದೆ. ಅವರ ಮೃತದೇಹವು ಭಾಗಶಃ ಕೊಳೆತ ಸ್ಥಿತಿಯಲ್ಲಿ ನಗರದ ಬಿಜೈ ಬಾರಬೈಲ್‌ನ ಅವರ ಮನೆಯಲ್ಲಿ ಪತ್ತೆಯಾಗಿದ್ದು ಅವರ ರಕ್ತ ಸಂಬಂಧಿಕರಿದ್ದರೆ ಸಂಪರ್ಕಿಸುವಂತೆ ಉರ್ವ ಠಾಣಾ (0824-2220822/2220800) ಪೊಲೀಸರು ತಿಳಿಸಿದ್ದಾರೆ. ಹರೀಶ್ ಆಚಾರ್ಯ ಅವರು ಶುಕ್ರವಾರದಂದು ನ್ಯಾಯಾಲಯದ ಕಲಾಪಕ್ಕೆ ಹಾಜರಾಗಿದ್ದರು. ಜು. 9ರ ಬೆಳಗ್ಗೆ 10ರಿಂದ ಜು.11ರ ಬೆಳಗ್ಗೆ 11ರ ನಡುವೆ ಮನೆಯಲ್ಲಿರುವ ಸಮಯ ಹೃದಯಾಘಾತ ಅಥವಾ ಆಕಸ್ಮಿಕವಾಗಿ ಮೃತಪಟ್ಟಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ.

Also Read  ಕ್ರಿಕೆಟ್ ಮೈದಾನದಲ್ಲಿ ಹೃದಯಾಘಾತದಿಂದ ಯುವಕ ಮೃತ್ಯು

error: Content is protected !!
Scroll to Top