ನಕಲಿ‌ ದಾಖಲೆ ಸೃಷ್ಟಿ ಕಛೇರಿಗೆ ಇ.ಒ ದಾಳಿ- ಕಡಬ ಸಹಿತ ಮೂರು ಗ್ರಾ.ಪಂ.ಗಳ ಮೊಹರು ವಶಕ್ಕೆ

(ನ್ಯೂಸ್ ಕಡಬ) newskadaba.com ಪುತ್ತೂರು, ಜು. 11. ಭೂದಾಖಲೆ ಸಹಿತ ಹಲವಾರು ವಿಚಾರಗಳಿಗೆ ನಿರಾಪೇಕ್ಷಣಾ ಪತ್ರದ ನಕಲಿ ದಾಖಲೆ ಪತ್ರಗಳನ್ನು ಮಾಡುತ್ತಿದ್ದ ಆರೋಪಕ್ಕೆ ಪುತ್ತೂರು ಪಡೀಲ್ ನಲ್ಲಿರುವ ಕಚೇರಿಯೊಂದಕ್ಕೆ ಅಧಿಕಾರಿಗಳು ದಾಳಿ ನಡೆಸಿದ ಕುರಿತು ವರದಿಯಾಗಿದೆ.


ಪಡೀಲ್‌ ನ ವಿಶ್ವನಾಥ್‌ ಎಂಬವರಿಗೆ ಸೇರಿದ ಇಲೆಕ್ಟ್ರಿಕಲ್ಸ್ ವರ್ಕ್ ಶಾಪ್ ಗೆ ದಾಳಿ ನಡೆಸಿದ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ನವೀನ್‌ ಭಂಡಾರಿ ನೇತೃತ್ವದ ತಂಡ, ಪುತ್ತೂರು ಮತ್ತು ಕಡಬ ತಾಲೂಕಿನ ಎಲ್ಲಾ ಗ್ರಾ.ಪಂ.ಗಳ ಮೊಹರು ಮತ್ತು ಬಂಟ್ವಾಳ ತಾಲೂಕಿನ ಮೂರು ಗ್ರಾ.ಪಂ. ಗಳ ಪಿಡಿಒ ಸೀಲ್‌ ಹಾಗೂ ನಗರ ಸಭೆಯ ಅಧಿಕಾರಿಗಳ ಮೊಹರನ್ನು ವಶಪಡಿಸಿಕೊಂಡಿದ್ದಾರೆ ಎನ್ನಲಾಗಿದೆ.

Also Read  ಕಟ್ಟಡ ಕಾರ್ಮಿಕರ ಮಕ್ಕಳಿಗೆ ಟ್ಯಾಬ್ ವಿತರಣೆ ➤ ಅರ್ಹರಿಂದ ಅರ್ಜಿ ಆಹ್ವಾನ

error: Content is protected !!
Scroll to Top