ಮಂಗಳೂರು, ಎಟಿಎಂ ದರೋಡೆಗೆ ವಿಫಲ ಯತ್ನ ► ಪತ್ರಕರ್ತನ ಸಮಯಪ್ರಜ್ಞೆಯಿಂದ ತಪ್ಪಿದ ದರೋಡೆ ಯತ್ನ

(ನ್ಯೂಸ್ ಕಡಬ) newskadaba.com ಮಂಗಳೂರು, ಜ.27. ನಗರದ ವೆಲೇನ್ಸಿಯಾದಲ್ಲಿರುವ ಎಟಿಎಮ್ ದರೋಡೆಯೊಂದು ಪತ್ರಕರ್ತರ ಸಮಯಪ್ರಜ್ಞೆಯಿಂದಾಗಿ ತಪ್ಪಿದ ಘಟನೆ ಶನಿವಾರ ತಡರಾತ್ರಿ ನಡೆದಿದೆ.

ಶನಿವಾರ ಮಧ್ಯರಾತ್ರಿ ವೆಲೆನ್ಸಿಯಾ ಕೆನರಾ ಬ್ಯಾಂಕ್ ಎಟಿಎಮ್ ಬಳಿ ಬುರ್ಕಾ ಹಾಕಿಕೊಂಡು ಸಂಶಯಾಸ್ಪದ ರೀತಿಯಲ್ಲಿ ವ್ಯಕ್ತಿಯೋರ್ವ ಕುಳಿತುಕೊಂಡಿರುವುದನ್ನು ನೋಡಿದ ಪತ್ರಕರ್ತರೋರ್ವರು ತಕ್ಷಣವೇ ಪೋಲಿಸರಿಗೆ ಮಾಹಿತಿ ನೀಡಿದ್ದು, ಪೋಲಿಸರು ಸ್ಥಳಕ್ಕಾಗಮಿಸಿ ಎಟಿಎಂ ದರೋಡೆಯನ್ನು ವಿಫಲಗೊಳಿಸಿದ್ದಾರೆ. ಸ್ಥಳಕ್ಕೆ ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಆಗಮಿಸಿದ್ದು, ಘಟನೆಯ ತನಿಖೆ ನಡೆಯುತ್ತಿದೆ.

Also Read  ಕೈಕಂಬ ಸರಕಾರಿ ಶಾಲೆಯ ರಸ್ತೆ ಕಾಂಕ್ರೀಟೀಕರಣಕ್ಕೆ ಚಾಲನೆ

error: Content is protected !!
Scroll to Top