ಕುಂದುಕೊರತೆಗಳ ಬಗ್ಗೆ ದೂರು ಸಲ್ಲಿಸಲು ಬಯಸುತ್ತೀರಾ..? ➤ ನೇರವಾಗಿ ಸಿಎಂ ಕಛೇರಿಗೆ ದೂರು ಸಲ್ಲಿಸಲು ಹೊಸ ಟ್ವಿಟರ್ ಖಾತೆ ಆರಂಭ

(ನ್ಯೂಸ್ ಕಡಬ) newskadaba.com ಬೆಂಗಳೂರು, ಜು. 11. ಸಾರ್ವಜನಿಕರ ಕುಂದು ಕೊರತೆಗಳನ್ನು ನೇರವಾಗಿ ಮುಖ್ಯಮಂತ್ರಿಗಳ ಕಚೇರಿಯ ಸಿಬ್ಬಂದಿಗಳ ಗಮನಕ್ಕೆ ತರಲು ಮಾಧ್ಯಮ ಮತ್ತು ಸಾರ್ವಜನಿಕರಿಗೆ ನೆರವಾಗುವ ಉದ್ದೇಶದಿಂದ ಹೊಸ ಟ್ವಿಟರ್ ಖಾತೆಯೊಂದನ್ನು ತೆರೆಯಲಾಗಿದೆ.


ಈ ಟ್ವಿಟ್ಟರ್ ಖಾತೆಗೆ ಸಾರ್ವಜನಿಕರು ತಮ್ಮ ಯಾವುದೇ ಸಾರ್ವಜನಿಕ ಕುಂದು ಕೊರತೆಗಳಿದ್ದಲ್ಲಿ ಆ ಸಮಸ್ಯೆಗಳನ್ನು ಟ್ಯಾಗ್ ಮಾಡಬಹುದು. ಎಲ್ಲವನ್ನೂ ಕಚೇರಿಯ ಸಿಬ್ಬಂದಿ ಮತ್ತು ಅಧಿಕಾರಿಗಳು ಗಮನಿಸಿ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಇಲಾಖೆಗಳ ಸಿಬ್ಬಂದಿಯ ಗಮನಕ್ಕೆ ತರುವ ಮೂಲಕ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಈ ಪ್ರಯತ್ನ ಮಾಡಲಾಗುತ್ತಿದೆ.

Also Read  ಶಿವಮೊಗ್ಗ: ಎಂಜಿನಿಯರಿಂಗ್ ವಿದ್ಯಾರ್ಥಿನಿ ಅನುಮಾನಸ್ಪದ ಸಾವು

https://twitter.com/osd_cmkarnataka?s=08 ಸಾರ್ವಜನಿಕರು ಕುಂದುಕೊರತೆಗಳನ್ನು ಮುಖ್ಯಮಂತ್ರಿ ಕಚೇರಿಯ ಈ ಖಾತೆಗೆ ಟ್ಯಾಗ್ ಮಾಡಬಹುದಾಗಿದೆ.

error: Content is protected !!
Scroll to Top