ಕೆಮ್ಮಾರ: ಸ.ಉ.ಹಿ.ಪ್ರಾ. ಶಾಲೆಯಲ್ಲಿ ನೋಟ್ ಪುಸ್ತಕ ಮತ್ತು ಕೊಡೆ ವಿತರಣೆ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಜು. 11. ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದಾನಿಗಳ ಸಹಕಾರದಿಂದ ಅರ್ಹ ಬಡ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ಮತ್ತು ಛತ್ರಿ ವಿತರಿಸಲಾಯಿತು.

ದಾನಿಗಳಾದ ಮೈಸೂರು ಎಸ್‌ಎಲ್‌ವಿ ಬುಕ್ಸ್ ಇಂಡಿಯಾ ಪ್ರೈ. ಲಿಮಿಟೆಡ್ ಗ್ರೂಪಿನ ಮಾಲೀಕರಾದ ದಿವಾಕರ ದಾಸ್ ಮೈಸೂರು ರವರು ಶಾಲೆಯ 45 ಅರ್ಹ ಬಡ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕಗಳನ್ನು ನೀಡಿ ಸಹಕರಿಸಿದರು. ಮಾತ್ರವಲ್ಲದೇ ಕೆಮ್ಮಾರ ಶಾಲೆಯ ಹಳೇ ವಿದ್ಯಾರ್ಥಿ ಹರಿನಾರಾಯಣ ಮತ್ತು ಅವರ ಧರ್ಮ ಪತ್ನಿ ಮಾಜಿ ಪಂಚಾಯತ್ ಸದಸ್ಯೆ ಮಾಲತಿ ಹರಿನಾರಾಯಣ ರವರ ಸಹಕಾರದಿಂದ ಶಾಲೆಯ 20 ಅರ್ಹ ಬಡ ವಿದ್ಯಾರ್ಥಿಗಳಿಗೆ ಛತ್ರಿಯನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀಮತಿ ಜಯಶ್ರೀ ಎಂ. ಮಾತನಾಡಿ, ಸರಕಾರಿ ಶಾಲೆಯ ಬಡ ವಿದ್ಯಾರ್ಥಿಗಳಿಗೆ ಪಠ್ಯ ಪರಿಕರಗಳನ್ನು ನೀಡಿ ಸಹಕರಿಸಿದ ದಾನಿಗಳಿಗೆ ಕೃತಜ್ಞತೆಯನ್ನು ಸಲ್ಲಿಸಿದರು. ಸರಕಾರಿ ಶಾಲೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ದಾನಿಗಳು ಮಕ್ಕಳ ಶೈಕ್ಷಣಿಕ ಪ್ರಗತಿಗೆ ಸಹಕರಿಸುತ್ತಿರುವುದು ಮಾದರಿ ಕಾರ್ಯದ ಜೊತೆಗೆ ಹೆಮ್ಮೆಯ ವಿಚಾರವಾಗಿದೆ ಎಂದರು. ಅದೇ ರೀತಿ ಈ ವಿಚಾರವಾಗಿ SLV ಗ್ರೂಪ್ ನ ಕೊಡುಗೈ ದಾನಿಯನ್ನು ಪರಿಚಯಿಸಿ ಸಹಕರಿಸಿದ ವಸಂತ ಅಮೀನ್ ಪಾದೆ ಮತ್ತು ಪದ್ಮನಾಭ ಶೆಟ್ಟಿ ಇವರಿಗೂ ಕೃತಜ್ಞತೆಯನ್ನು ಸಲ್ಲಿಸಿದರು. ವೇದಿಕೆಯಲ್ಲಿ ಶಾಲಾಭಿವೃಧ್ದಿ ಸಮಿತಿ ಅಧ್ಯಕ್ಷರಾದ ಅಝೀಝ್  ಬಿ.ಕೆ, ಸಮಿತಿ ಸದಸ್ಯರಾದ ಪದ್ಮನಾಭ ಶೆಟ್ಟಿ, ಶ್ರೀಮತಿ ಯೋಗಿತಾ, ಶ್ರೀಮತಿ ಸುಮಯ್ಯ, ದೈಹಿಕ ಶಿಕ್ಷಣ ಶಿಕ್ಷಕಿ ಶ್ರೀಮತಿ ಮೋಹನಾಂಗಿ, ಶ್ರೀಮತಿ ಸುಮನಾ, ಶಿಕ್ಷಕ ವೃಂದ ಸೇರಿದಂತೆ ಹಲವರು ಉಪಸ್ಥಿತರಿದ್ದರು.

error: Content is protected !!

Join the Group

Join WhatsApp Group