ಬಜೆಟ್ ಬೆಲೆಯ ಹ್ಯುಂಡೈ ಎಕ್ಸ್‌ಟರ್ ಮೈಕ್ರೊ ಎಸ್ ಯುವಿ ಬಿಡುಗಡೆ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಜು.10: ಹ್ಯುಂಡೈ ಇಂಡಿಯಾ ಕಂಪನಿಯು ತನ್ನ ಬಹುನೀರಿಕ್ಷಿತ ಎಕ್ಸ್‌ಟರ್ ಕಾರು ಮಾದರಿಯನ್ನು ಅಧಿಕೃತವಾಗಿ ಬಿಡುಗಡೆ ಮಾಡಿದೆ. ಮಧ್ಯಮ ಕ್ರಮಾಂಕದ ಪ್ರೀಮಿಯಂ ಕಾರು ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಹ್ಯುಂಡೈ ಕಂಪನಿಯು ಬಹುನೀರಿಕ್ಷಿತ ಎಕ್ಸ್‌ಟರ್ ಮೈಕ್ರೊ ಎಸ್ ಯುವಿ ಬಿಡುಗಡೆ ಮಾಡಿದ್ದು, ಹೊಸ ಕಾರು ಮಾದರಿಯು ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ. 5,99,990 ಆರಂಭಿಕ ಬೆಲೆ ಹೊಂದಿದೆ.

ಹೊಸ ಎಕ್ಸ್‌ಟರ್ ಕಾರು ಮಾದರಿಯು ಗ್ರಾಹಕರ ಬೇಡಿಕೆಯೆಂತೆ ಇಎಕ್ಸ್, ಎಸ್, ಎಸ್ಎಕ್ಸ್, ಎಸ್ಎಕ್ಸ್(ಆಪ್ಷನ್) ಮತ್ತು ಎಸ್ಎಕ್ಸ್ ಆಪ್ಷನ್(ಕನೆಕ್ಟ್) ಎನ್ನುವ ಪ್ರಮುಖ ಐದು ವೆರಿಯೆಂಟ್ ಗಳಲ್ಲಿ ಖರೀದಿಗೆ ಲಭ್ಯವಿದ್ದು, ಇದರಲ್ಲಿ ಬೆಸ್ ವೆರಿಯೆಂಟ್ ಎಕ್ಸ್ ಶೋರೂಂ ಪ್ರಕಾರ ರೂ. 5,99,990 ಬೆಲೆ ಹೊಂದಿದ್ದರೆ ಟಾಪ್ ಎಂಡ್ ವೆರಿಯೆಂಟ್ ರೂ. 10 ಲಕ್ಷ ಬೆಲೆ ಹೊಂದಿದೆ.

ಮೈಕ್ರೊ ಎಸ್ ಯುವಿ ವೈಶಿಷ್ಟ್ಯತೆ ಹೊಂದಿರುವ ಹೊಸ ಎಕ್ಸ್‌ಟರ್ ಕಾರು ಮಾದರಿಯು ಪ್ರಸ್ತುತ ಮಾರುಕಟ್ಟೆಯಲ್ಲಿ ಗ್ರ್ಯಾಂಡ್ ಐ10 ನಿಯೋಸ್ ಮತ್ತು ಔರಾ ಕಾರು ಮಾದರಿಗಳೊಂದಿಗೆ ಹಲವಾರು ತಾಂತ್ರಿಕ ಸೌಲಭ್ಯಗಳನ್ನು ಹಂಚಿಕೊಂಡಿದ್ದು, ಪೆಟ್ರೋಲ್ ಮತ್ತು ಸಿಎನ್ ಜಿ ಆವೃತ್ತಿಗಳೊಂದಿಗೆ ಖರೀದಿಗೆ ಲಭ್ಯವಿದೆ. ಹೊಸ ಕಾರಿನಲ್ಲಿರುವ ಸಿಎಸ್ ಜಿ ಆವೃತ್ತಿಯು ಪ್ರಮುಖ ಎರಡು ವೆರಿಯೆಂಟ್ ಗಳಲ್ಲಿ ಖರೀದಿಗೆ ಲಭ್ಯವಿದ್ದು, ಇವು ಎಕ್ಸ್ ಶೋರೂಂ ಪ್ರಕಾರ ರೂ. 8.24 ಲಕ್ಷದಿಂದ ರೂ. 8.97 ಲಕ್ಷ ಬೆಲೆ ಹೊಂದಿವೆ.

Also Read  ಮದುವೆಗೆ ದೋಷಗಳು ನಿವಾರಣೆಯಾಗಬೇಕು ಎಂದರೆ ಈ ನಿಯಮ ಪಾಲಿಸಿ ಕಷ್ಟಗಳು ಪರಿಹಾರ ಆಗುತ್ತದೆ

ಹೊಸ ಎಕ್ಸ್‌ಟರ್ ಕಾರಿನಲ್ಲಿ ಹ್ಯುಂಡೈ ಕಂಪನಿಯು 1.2 ಲೀಟರ್ ನ್ಯಾಚುರಲಿ ಆಸ್ಪೆರೆಟೆಡ್ ಪೆಟ್ರೋಲ್ ಎಂಜಿನ್ ಜೋಡಣೆ ಮಾಡಿದ್ದು, ಇದು 5-ಸ್ಪೀಡ್ ಮ್ಯಾನುವಲ್ ಅಥವಾ 5-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಯೊಂದಿಗೆ 83 ಹಾರ್ಸ್ ಪವರ್ 114 ಎನ್ಎಂ ಉತ್ಪಾದನೆ ಮೂಲಕ ಪ್ರತಿ ಲೀಟರ್ ಗೆ ಗರಿಷ್ಠ 19.4 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತದೆ. ಹಾಗಾಯೇ ಫಾಕ್ಟರಿ ಸಿಎನ್ ಜಿ ಕಿಟ್ ಜೋಡಣೆ ಹೊಂದಿರುವ ಮಾದರಿಯು ಮ್ಯಾನುವಲ್ ಗೇರ್ ಬಾಕ್ಸ್ ಆಯ್ಕೆಯೊಂದಿಗೆ 69 ಹಾರ್ಸ್ ಪವರ್ ಮತ್ತು 95.2 ಎನ್ಎಂ ಟಾರ್ಕ್ ಉತ್ಪಾದನೆಯೊಂದಿಗೆ ಪ್ರತಿ ಕೆಜಿ ಸಿಎನ್ ಜಿಗೆ ಗರಿಷ್ಠ 27.10 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತದೆ.

Also Read  ಗಂಡ ಹೆಂಡತಿ ನಡುವೆ ಹೊಂದಾಣಿಕೆಯಿಲ್ಲ ಮನೆಯಲ್ಲಿ ಕಲಹ ಉಂಟಾಗುತ್ತಿದ್ದರೆ ತಪ್ಪದೆ ಈ ನಿಯಮ ಪಾಲಿಸಿ ಕಷ್ಟಗಳು ಪರಿಹಾರ ಆಗುತ್ತದೆ

ಹೊಸ ಎಕ್ಸ್‌ಟರ್ ಕಾರಿನಲ್ಲಿ ಹ್ಯುಂಡೈ ಕಂಪನಿಯು ಹಲವಾರು ಸ್ಟ್ಯಾಂಡರ್ಡ್ ಸುರಕ್ಷಾ ಸೌಲಭ್ಯಗಳನ್ನು ಜೋಡಣೆ ಮಾಡಿದ್ದು, ಆರು ಏರ್ ಬ್ಯಾಗ್ ಗಳ ಜೊತೆಗೆ ಇಎಸ್ ಸಿ, ಹಿಲ್ ಅಸಿಸ್ಟ್ ಕಂಟ್ರೋಲ್, ಎಬಿಎಸ್ ಜೊತೆಗೆ ಇಬಿಡಿ, ರಿಯರ್ ಪಾರ್ಕಿಂಗ್ ಕ್ಯಾಮೆರಾ ಜೊತೆ ಸೆನ್ಸಾರ್, ತ್ರಿ ಪಾಯಿಂಟ್ ಸೀಟ್ ಬೆಲ್ಟ್ ಮತ್ತು ಐಸೋಫಿಕ್ಸ್ ಚೈಲ್ಡ್ ಸೀಟ್ ಮೌಂಟ್ ಸೌಲಭ್ಯಗಳಿವೆ.

 

error: Content is protected !!
Scroll to Top