ಕಡಬ: ಜೈನಮುನಿಯ ಹತ್ಯೆ ಖಂಡಿಸಿ ವಿಹಿಂಪ ಪ್ರತಿಭಟನೆ ➤ ಸೂಕ್ತ ತನಿಖೆಗೆ ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗೆ ಮನವಿ

(ನ್ಯೂಸ್ ಕಡಬ) newskadaba.com ಕಡಬ, ಜು. 10. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಹಿರೇಕೋಡಿ ನಂದಿ ಪರ್ವತ ಆಶ್ರಮದ ಜೈನ ಮುನಿ ಕಾಮಕುಮಾರ ನಂದಿ ಮಹಾರಾಜರ ಹತ್ಯೆ ಖಂಡಿಸಿ ಕಡಬ ತಾಲೂಕು ವಿಶ್ವ ಹಿಂದೂ ಪರಿಷತ್ ವತಿಯಿಂದ ಇಂದು ಸಂಜೆ ಕಡಬ ಪೇಟೆಯಲ್ಲಿ ಬೃಹತ್ ಪ್ರತಿಭಟನೆಯನ್ನು ನಡೆಸಲಾಯಿತು.

ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಯಶೋಧರ ಯಾನೆ ತಮ್ಮಯ್ಯ ಬಲ್ಲಾಳ್ ರಂಜಿಲಾಡಿ ಬೀಡು ಅವರು, ಜೈನ ಧರ್ಮ ಹಿಂದಿನಿಂದಲೂ ಅಹಿಂಸಾ ತತ್ವದ ಮೇಲೆ ನೆಲೆ ನಿಂತಿದ್ದು ನಮ್ಮದೇ ಧರ್ಮದ ಮುನಿ ಸಂತರನ್ನು ಈ ರೀತಿ ಬರ್ಬರವಾಗಿ ಹತ್ಯೆ ಮಾಡಿರುವುದು ಅತ್ಯಂತ ದುಃಖಕರ ಸಂಗತಿ. ಈ ತಪ್ಪು ಮಾಡಿದವರಿಗೆ ಕಠೋರ ಶಿಕ್ಷೆಯಾಗಬೇಕು ಎಂದು ಹೇಳಿದರು. ಪ್ರತಿಭಟನೆಯಲ್ಲಿ ದಿಕ್ಸೂಚಿ ಭಾಷಣವನ್ನು ಮಾಡಿದ ವಿಶ್ವ ಹಿಂದೂ ಪರಿಷತ್ ಪುತ್ತೂರು ಜಿಲ್ಲಾ ಕಾರ್ಯದರ್ಶಿ ನವೀನ್ ನೆರಿಯ, ಕಾಂಗ್ರೆಸ್ ಸರಕಾರದ ಆಡಳಿತದಲ್ಲಿ ಇದೀಗ ಮತಾಂಧರು, ಕೊಲೆಗಡುಕರು ಮತ್ತೆ ತಲೆಯೆತ್ತಿದ್ದು ರಾಜ್ಯದಲ್ಲಿ ಈ ರೀತಿಯ ಹತ್ಯೆಗಳಿಂದ ಭಯದ ವಾತಾವರಣ ನಿರ್ಮಾಣವಾಗುತ್ತಿದೆ ಎಂದರು.

Also Read  ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರ ಪ್ರವಾಸ


ಮತಾಂತರ, ಗೋ ಹತ್ಯೆ ಕಾಯ್ದೆಗಳನ್ನು ರಾಜ್ಯ ಸರ್ಕಾರ ಹಿಂಪಡೆದರೆ ಕಾನೂನು ಚೌಕಟ್ಟಿನ ಒಳಗಡೆಯೂ, ಕಾನೂನು ಮೀರಿಯೂ ಹೋರಾಟ ಮಾಡುವುದು ಅನಿವಾರ್ಯವಾಗುತ್ತದೆ ಎಂಬ ಎಚ್ಚರಿಕೆಯನ್ನು ಕೂಡಾ ರಾಜ್ಯ ಸರಕಾರಕ್ಕೆ ನೀಡಿದರು.

ಪ್ರತಿಭಟನೆ ನಂತರ ಕಡಬ ತಹಶೀಲ್ದಾರ್ ಕಚೇರಿಗೆ ತೆರಳಿದ ಕಾರ್ಯಕರ್ತರು ಹಾಗೂ ಮುಖಂಡರು ತಹಶೀಲ್ದಾರ್ ಅವರಿಗೆ ಮನವಿಯನ್ನು ಸಲ್ಲಿಸಿ, ಜೈನಮುನಿಯ ಹತ್ಯೆ ಮಾಡಿದ ಬಗ್ಗೆ ಸೂಕ್ತ ತನಿಖೆ ನಡೆಸಿ ಆರೋಪಿಗಳಿಗೆ ಕಠಿಣ ಶಿಕ್ಷೆಯನ್ನು ವಿಧಿಸುವಂತೆ ತಹಶೀಲ್ದಾರ್ ಮುಖಾಂತರ ಮುಖ್ಯಮಂತ್ರಿಗೆ ಮನವಿಯನ್ನು ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಕಡಬ ವಿಶ್ವ ಹಿಂದೂ ಪರಿಷತ್ ಸಂಘಟನೆ ಪ್ರಮುಖರಾದ ರಾಧಾಕೃಷ್ಣ ಕೋಲ್ಬೆ, ಸತೀಶ್, ಪುಲಸ್ಯ ರೈ, ಪ್ರಕಾಶ್ ಎನ್.ಕೆ, ರಘು ಕೋಡಿಂಬಾಳ ಹಾಗೂ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.

Also Read  ಮಂಗಳೂರು :ಜಿಲ್ಲೆಯ ಹಾಲು ಉತ್ಪಾದಕರಿಗೆ ಮತ್ತೆ ಶಾಕ್

error: Content is protected !!
Scroll to Top