ಜೈನಮುನಿ ಹತ್ಯೆ- ಕಠಿಣ ಕ್ರಮಕ್ಕೆ ಒತ್ತಾಯ ➤ ಮಂಗಳೂರಿನಲ್ಲಿ ಮೌನ ಪ್ರತಿಭಟನೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜು. 10. ಬೆಳಗಾವಿಯ ಚಿಕ್ಕೋಡಿ ತಾಲೂಕಿನ ಹಿರೇಕೋಡಿ ಗ್ರಾಮದ ನಂದಿ ಪರ್ವತ ಆಶ್ರಮದ ಜೈನಮುನಿ ಕಾಮಕುಮಾರ ನಂದಿ ಮಹಾರಾಜರ ಹತ್ಯೆಗೈದವರಿಗೆ ಕಠಿಣ ಶಿಕ್ಷೆಯಾಗಬೇಕೆಂದು ಒತ್ತಾಯಿಸಿ ಭಾರತೀಯ ಜೈನ್ ಮಿಲನ್ ಮಂಗಳೂರು ವಿಭಾಗ ಮತ್ತು ಜೈನ ಸಮಾಜದ ನೇತೃತ್ವದಲ್ಲಿ ಮೌನ ಪ್ರತಿಭಟನಾ ಮೆರವಣಿಗೆ ನಡೆಯಿತು.

ಮೂಡುಬಿದಿರೆಯ ಜಗದ್ಗುರು ಡಾ. ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ಮಹಾ ಸ್ವಾಮೀಜಿಯವರ ನೇತೃತ್ವದಲ್ಲಿ ಕ್ಲಾಕ್‌ ಟವರ್‌ ನಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ನಡೆದ ಮೆರವಣಿಗೆಯಲ್ಲಿ ಜೈನ ಸಮುದಾಯದ ಪ್ರಮುಖರಾದ ಪುಷ್ಪರಾಜ್ ಜೈನ್, ಸುರೇಶ್ ಬಲ್ಲಾಳ್, ಸುದರ್ಶನ ಜೈನ್, ರತ್ನಾಕರ ಜೈನ್, ಜಗತ್ಪಾಲ್ ಜೈನ್ ಮೊದಲಾದವರು ಪಾಲ್ಗೊಂಡಿದ್ದರು. ಜಿಲ್ಲಾಧಿಕಾರಿಯವರ ಮೂಲಕ ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಲಾಯಿತು.

Also Read  ನೆಲ್ಯಾಡಿ: ಜೀಪು - ಕಾರು ಢಿಕ್ಕಿ ► ಐವರು ಗಂಭೀರ - ಹಲವರಿಗೆ ಗಾಯ

error: Content is protected !!
Scroll to Top