ಹೋಂಗಾರ್ಡ್ಸ್ ಸಿಬಂದಿಯ ಮಾಸಿಕ ಕರ್ತವ್ಯದ ಅವಧಿ ಹೆಚ್ಚಿಸಿ ➤ ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಪತ್ರ

(ನ್ಯೂಸ್ ಕಡಬ) newskadaba.com ಮಂಗಳೂರು, ಜು. 10. ನಗರದ ಕಮಿಷನರೇಟ್‌ ವ್ಯಾಪ್ತಿಯ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಗೃಹ ರಕ್ಷಕದಳದ ಸಿಬ್ಬಂದಿಗಳ ಕರ್ತವ್ಯದ ಅವಧಿಯನ್ನು ತಿಂಗಳಿಗೆ ಕನಿಷ್ಠ 20 ದಿನಗಳಿಗೆ ಹೆಚ್ಚಿಸುವಂತೆ ವಿಧಾನ ಪರಿಷತ್‌ ಸದಸ್ಯ ಹರೀಶ್‌ ಕುಮಾರ್‌ ಅವರು ಗೃಹಸಚಿವ ಡಾ.ಜಿ.ಪರಮೇಶ್ವರ್ ಅವರಿಗೆ ಪತ್ರದ ಮೂಲಕ ತಿಳಿಸಿದ್ದಾರೆ.

 

 

ಕಮಿಷನರೇಟ್‌ ವ್ಯಾಪ್ತಿಯ ಠಾಣೆಗಳಲ್ಲಿ ಗೃಹ ರಕ್ಷಕ ಸಿಬ್ಬಂದಿಗಳಿಗೆ ತಿಂಗಳಲ್ಲಿ ಕೇವಲ 10 ದಿನ ಮಾತ್ರ ಕರ್ತವ್ಯ ನಿರ್ವಹಿಸಲು ಅವಕಾಶ ಸಿಗುತ್ತಿದೆ. ಆದರೆ ಗ್ರಾಮೀಣ ಪ್ರದೇಶದ ಠಾಣೆಗಳಲ್ಲಿ ತಿಂಗಳಲ್ಲಿ 30 ದಿನವೂ ಕರ್ತವ್ಯ ನಿರ್ವಹಿಸಲು ಅವಕಾಶ ಸಿಗುತ್ತಿದೆ. ಈ ಸಿಬ್ಬಂದಿಗೆ ಗೌರವಧನವೇ ಜೀವನಾಧಾರ. ಹಾಗಾಗಿ ಕಮಿಷನರೇಟ್‌ ವ್ಯಾಪ್ತಿಯಲ್ಲೂ ಗೃಹರಕ್ಷಕ ಸಿಬ್ಬಂದಿಗಳಿಗೆ ತಿಂಗಳಲ್ಲಿ ಕನಿಷ್ಠ 20 ದಿನ ಕರ್ತವ್ಯ ನಿರ್ವಹಿಸಲು ಅವಕಾಶ ಕಲ್ಪಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

Also Read  ಹುತಾತ್ಮ ಸೈನಿಕರ ಬಲಿದಾನ ವ್ಯರ್ಥವಾಗದಿರಲಿ: ಡಾ|| ಚೂಂತಾರು- ಜಿಲ್ಲಾ ಗೃಹರಕ್ಷಕ ದಳ ಕಛೇರಿಯಲ್ಲಿ ಕಾರ್ಗಿಲ್ ವಿಜಯ ದಿವಸ್ ದಿನಾಚರಣೆ

error: Content is protected !!
Scroll to Top