ನಂಜನಗೂಡು ದೇವನೂರು ಮಠದ ಸ್ವಾಮೀಜಿ ನದಿಗೆ ಹಾರಿ ಆತ್ಮಹತ್ಯೆ..!

(ನ್ಯೂಸ್ ಕಡಬ) newskadaba.com ಮೈಸೂರು, ಜು. 10. ಇಲ್ಲಿನ ನಂಜನಗೂಡು ದೇವನೂರು ಮಠದ ಸ್ವಾಮೀಜಿ ಶಿಷ್ಯರಾಗಿದ್ದ ಶಿವಪ್ಪ ದೇವರು (60) ಟಿ.ನರಸೀಪುರ ತಾಲೂಕಿನ ಮೂಡುಕೊತೊರೆಯ ಬಳಿ ಕಾವೇರಿ ನದಿಗೆ ಹಾರಿ ಆತ್ಮಹತ್ಯೆ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ವರದಿಯಾಗಿದೆ.

ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಇವರು ಬಳಿಕ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ‌. ಮಠ ಹಾಗೂ ಮಠದ ಭಕ್ತರಲ್ಲಿ ಉತ್ತಮ ಹೆಸರು ಹೊಂದಿದ್ದ ಸ್ವಾಮೀಜಿ ಅವರು ಮೂಲತಃ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕಿನ ಕಲಿವೂರು ಗ್ರಾಮದವರು. ಕಳೆದ 45 ವರ್ಷಗಳಿಂದ ದೇವನೂರು ಮಠದಲ್ಲಿ ಸೇವೆ ಮಾಡಿಕೊಂಡಿದ್ದರು. ಘಟನಾ ಸ್ಥಳಕ್ಕೆ ತಲಕಾಡು ಪೊಲೀಸರು ಭೇಟಿ ನೀಡಿದ್ದಾರೆ.

Also Read  ಕಡಬ: ನಾಪತ್ತೆಯಾಗಿದ್ದ ವಿವಾಹಿತ ಮಹಿಳೆ ಪ್ರಿಯಕರನೊಂದಿಗೆ ಪತ್ತೆ

error: Content is protected !!
Scroll to Top