ನರ್ಸ್ ಜೊತೆ ಸೆಕ್ಸ್ ವೇಳೆ ರೋಗಿ ಮೃತ್ಯು ➤ ನರ್ಸ್ ಕೆಲಸದಿಂದ ವಜಾ

(ನ್ಯೂಸ್ ಕಡಬ) newskadaba.com ಬ್ರಿಟನ್, ಜು. 10. ಆಸ್ಪತ್ರೆಯಲ್ಲಿ ರೋಗಿ ಜೊತೆ ನರ್ಸ್ ಸೆಕ್ಸ್ ಮಾಡುತ್ತಿದ್ದ ವೇಳೆ ಹೃದಯಾಘಾತಕ್ಕೆ ಒಳಗಾಗಿ ರೋಗಿ ಮೃತಪಟ್ಟ ಘಟನೆ ಬ್ರಿಟನ್ ನ ವೇಲ್ಸ್ ನಲ್ಲಿ ನಡೆದಿರುವ ಕುರಿತು ವರದಿಯಾಗಿದೆ.

ನರ್ಸ್ ನ್ನು 42 ವರ್ಷದ ಫಿಲಿಪ್ಪೊನಿ ವಿಲಿಯಮ್ಸ್ ಎಂದು ಗುರುತಿಸಲಾಗಿದ್ದು, ಆಕೆಯನ್ನು ಕೆಲಸದಿಂದ ವಜಾ ಮಾಡಲಾಗಿದೆ. ನರ್ಸ್ ಒಂದು ವರ್ಷದಿಂದ ಆಸ್ಪತ್ರೆಯಲ್ಲಿದ್ದ ರೋಗಿಯನ್ನು ಪ್ರೇಮಿಸಿದ್ದು, ಇಬ್ಬರು ಕಾರು ಪಾರ್ಕಿಂಗ್ ನಲ್ಲಿ ಲೈಂಗಿಕ ಸಂಪರ್ಕ ನಡೆಸಿದ್ದರು. ಕಾರಿನ ಹಿಂಬದಿ ಸೀಟಿನಲ್ಲಿ ರೋಗಿಯ ಮೃತದೇಹ ಪತ್ತೆಯಾಗಿದ್ದು ಪ್ಯಾಂಟ್ ಕೆಳಗೆ ಜಾರಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈಕೆ ರೋಗಿಯ ಜೊತೆ ಲೈಂಗಿಕ ಚಟುವಟಿಕೆ ನಡೆಸಿದ್ದು ಅಕ್ಷಮ್ಯ ಅಪರಾಧ, ಅಲ್ಲದೇ ಆಕೆ ರೋಗಿ ಅಸ್ವಸ್ಥಗೊಂಡಾಗ ಆಂಬುಲೆನ್ಸ್ ಗೆ ಅಥವಾ ಆಸ್ಪತ್ರೆ ಸಿಬ್ಬಂದಿಗೆ ಕರೆ ಮಾಡದೇ ಸ್ನೇಹಿತರನ್ನು ಕರೆದು ಕರ್ತವ್ಯ ಲೋಪ ಎಸಗಿದ್ದಾರೆ ಎಂದು ಆಸ್ಪತ್ರೆ ಪ್ರಕಟಣೆಯಲ್ಲಿ ತಿಳಿಸಿದೆ.

Also Read  ನಿಮ್ಮ ಜೀವನದ ಸಮಸ್ಯೆ ಈ ಒಂದು ವಿಧಾನ ತಿಳಿದುಕೊಳ್ಳಿ

error: Content is protected !!
Scroll to Top