(ನ್ಯೂಸ್ ಕಡಬ) newskadaba.com ಬೆಂಗಳೂರು, ಜು. 10. ಬೆಂಗಳೂರಿನ ಬೌರಿಂಗ್ ಮತ್ತು ಲೇಡಿ ಕರ್ಜನ್ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯಲ್ಲಿ (BMCRI) ಸುಮಾರು 23 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ಡಾಅಸೀಮಾ ಬಾನು ಅವರನ್ನು ಇದೀಗ ಸಂಸ್ಥೆಯ ಪ್ರಾಂಶುಪಾಲರನ್ನಾಗಿ ನೇಮಕ ಮಾಡಲಾಗಿದೆ.
ಬಿಎಂಸಿಆರ್‍ಐ ಪ್ರಾಂಶುಪಾಲ ಹುದ್ದೆಗೇರಿದ ಪ್ರಥಮ ಮುಸ್ಲಿಂ ಮಹಿಳೆಯಾಗಿದ್ದಾರೆ ಅಸೀಮಾ ಬಾನು. ಇದೇ ಸಂಸ್ಥೆಯಲ್ಲಿ 90ರ ದಶಕದಲ್ಲಿ ವೈದ್ಯಕೀಯ ಪದವಿ ಮತ್ತು ಸ್ನಾತ್ತಕೋತ್ತರ ಪದವಿ ಪಡೆದಿರುವ ಡಾ ಅಸೀಮಾ ಬಾನು, 2000 ಇಸವಿಯಲ್ಲಿ ಸಂಸ್ಥೆಯ ಮೈಕ್ರೋಬಯಾಲಜಿ ವಿಭಾಗಕ್ಕೆ ನೇಮಕಗೊಂಡಿದ್ದರು. ನಂತರ ಸಂಸ್ಥೆಯ ಮೈಕ್ರೊಬಯಾಲಜಿ ವಿಭಾಗದ ಮುಖ್ಯಸ್ಥೆಯಾಗಿ, ಗುಣಮಟ್ಟ ಮತ್ತು ಸೋಂಕು ನಿಯಂತ್ರಣಾಧಿಕಾರಿಯಾಗಿ, ಆಸ್ಪತ್ರೆಯ ವೈದ್ಯಕೀಯ ಶಿಕ್ಷಣ ವಿಭಾಗದ ಸಂಚಾಲಕಿಯಾಗಿ ಹಾಗೂ ಅಲ್ಲಿನ ಸಿಮ್ಯುಲೇಶನ್ ಮತ್ತು ಕೌಶಲ್ಯಗಳ ಕೇಂದ್ರದ ನೋಡಲ್ ಅಧಿಕಾರಿಯಾಗಿ ಹಾಗೂ ವಿಕ್ಟೋರಿಯಾ ಆಸ್ಪತ್ರೆಯ ಕೋವಿಡ್ ವಾರ್ಡ್‍ನ ನೋಡಲ್ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ.