ಸಿಬ್ಬಂದಿಯ ಮೇಲಿನ ಕೋಪಕ್ಕೆ ಹುಸಿಬಾಂಬ್ ಕರೆ- ಆರೋಪಿ ಖಾಕಿ ಬಲೆಗೆ

crime, arrest, suspected

(ನ್ಯೂಸ್ ಕಡಬ) newskadaba.com ಬೆಂಗಳೂರು, ಜು. 10. ಶಿವಾಜಿನಗರದ ಆಜಾಂ ಮಸೀದಿಯಲ್ಲಿ ಬಾಂಬ್​ ಇದೆ ಎಂದು ಸುಳ್ಳು ಕರೆ ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.

ಬಂಧಿತನನ್ನು ಮಹಾರಾಷ್ಟ್ರ ಮೂಲದ ಸೈಯದ್​ ಮಹಮ್ಮದ್ ಅನ್ವರ್​(37) ಎಂದು ಗುರುತಿಸಲಾಗಿದೆ. ಜುಲೈ 04ರಂದು ಬೆಂಗಳೂರಿಗೆ ಬಂದಿದ್ದ ಸೈಯದ್,​ ಮದರಸಾ ಹೆಸರಿನಲ್ಲಿ ಮಸೀದಿಗಳಿಗೆ ತೆರಳಿ ಚಂದಾ ಕೇಳುತ್ತಿದ್ದ. ಅದರಂತೆ ಆಜಾಂ ಮಸೀದಿ ಬಳಿ ಚಂದಾ ಪಡೆದಿದ್ದ ಸೈಯದ್,​ ರಾತ್ರಿ ಮಸೀದಿಯಲ್ಲಿ ಮಲಗಲು ಅವಕಾಶ ಕೇಳಿದ್ದು, ಇದಕ್ಕೆ ಮಸೀದಿ ಸಿಬ್ಬಂದಿ ನಿರಾಕರಿಸಿದ್ದರು. ಇದರಿಂದ ಬೇಸರಗೊಂಡ ಸೈಯದ್ ಅಜಾಂ ಮಸೀದಿಯಲ್ಲಿ ಬಾಂಬ್ ಇಟ್ಟಿರುವುದಾಗಿ ಪೊಲೀಸರಿಗೆ ಹುಸಿ ಕರೆ ಮಾಡಿದ್ದಾನೆ. ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಪರಿಶೀಲಿಸಿದಾಗ ಯಾವುದೇ ಬಾಂಬ್​ ಇರಲಿಲ್ಲ. ಘಟನೆಗೆ ಸಂಬಂಧಿಸಿ ಆರೋಪಿ ವಿರುದ್ಧ ಪ್ರಕರಣ ದಾಖಲಿಸಿ, ಆರೋಪಿಯನ್ನು ಬಂಧಿಸಿದ್ದಾರೆ.

Also Read  ರಾಷ್ಟ್ರಗೀತೆ ವೇಳೆ ಪ್ಯಾಂಟ್ ನಲ್ಲೇ ಮೂತ್ರ ಮಾಡಿದ ಸುಡಾನ್ ಅಧ್ಯಕ್ಷ ➤  ವಿಡಿಯೋ ಮಾಡಿದ್ದ 6 ಪತ್ರಕರ್ತರ ಬಂಧನ            

error: Content is protected !!
Scroll to Top