ಹೆಗಲ ಮೇಲೆ 125 ಕೆಜಿ ಜೋಳ ಹೊತ್ತು ಗೊಮ್ಮಟೇಶ್ವರ ಬೆಟ್ಟ ಹತ್ತಿದ ಕೃಷಿಕ – ಕೇವಲ 41 ನಿಮಿಷಗಳಲ್ಲಿ 700 ಮೆಟ್ಟಿಲುಗಳನ್ನು ಹತ್ತಿ ಸಾಧನೆ

(ನ್ಯೂಸ್ ಕಡಬ) newskadaba.com ಹಾಸನ, ಜು.10. ಪ್ರಸಿದ್ಧ ಯಾತ್ರಾ ಕ್ಷೇತ್ರವಾದ ಶ್ರವಣಬೆಳಗೊಳದ ಗೊಮ್ಮಟೇಶ್ವರ ದೇವಸ್ಥಾನದ ಬೆಟ್ಟವನ್ನು 125 ಕೆಜಿ ಜೋಳದ ಚೀಲ ಹೊರುವ ಮೂಲಕ ಹತ್ತಿ ಕೃಷಿಕರೋರ್ವರು ಸಾಹಸ ಮೆರೆದಿದ್ದಾರೆ.

ಹಾಸನ ಜಿಲ್ಲೆಯ ಹುನ್ನೂರ ಗ್ರಾಮದ ಹನುಮಂತ ಪರಸಪ್ಪ ಸರಪಳಿ(43) ಎಂಬವರು ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ಶ್ರವಣಬೆಳಗೊಳದಲ್ಲಿರುವ ಗೊಮ್ಮಟೇಶ್ವರ ಬೆಟ್ಟದ ಮೇಲಿರುವ ದೇವಸ್ಥಾನದ ಸುಮಾರು 700 ಮೆಟ್ಟಿಲುಗಳನ್ನು ಹೆಗಲ ಮೇಲೆ 125 ಕೆಜಿ ಜೋಳವನ್ನು ಹೊತ್ತು ಕೇವಲ 41 ನಿಮಿಷಗಳಲ್ಲಿ ಹತ್ತುವ ಮೂಲಕ ಸಾಹಸಗೈದಿದ್ದಾರೆ. ಕೃಷಿಕರಾಗಿರುವ ಹನುಮಂತ ಅವರು, ನಿರಾಯಾಸವಾಗಿ ಬೆಟ್ಟವನ್ನು ಹತ್ತಿ ನೋಡುಗರನ್ನು ಹುಬ್ಬೇರುವಂತೆ ಮಾಡಿದ್ದಾರೆ.

Also Read  ನಕ್ಸಲ್ ವಿಕ್ರಂ ಗೌಡ ಎನ್ ಕೌಂಟರ್ ನಕಲಿ ಅಲ್ಲ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್

 

error: Content is protected !!
Scroll to Top