ಜೈನಮುನಿಗೆ ಕರೆಂಟ್ ಶಾಕ್ ಕೊಟ್ಟು ಕೊಲೆ- ಮೃತದೇಹವನ್ನು ತುಂಡರಿಸಿ ಕೊಳವೆ ಬಾವಿಗೆಸೆದ ಹಂತಕರು

(ನ್ಯೂಸ್ ಕಡಬ) newskadaba.com ಚಿಕ್ಕೋಡಿ, ಜು. 09. ನಾಪತ್ತೆಯಾಗಿದ್ದ ಚಿಕ್ಕೋಡಿ ತಾಲೂಕಿನ ಹಿರೇಕೋಡಿ ನಂದಿ ಪರ್ವತ ಜೈನ ಆಶ್ರಮದ ಕಾಮ ಕುಮಾರ ನಂದಿ ಮಹಾರಾಜರನ್ನು ದುಷ್ಕರ್ಮಿಗಳು ವಿದ್ಯುತ್ ಶಾಕ್ ಕೊಟ್ಟು, ಅಂಗಾಂಗ ಕತ್ತರಿಸಿ ಬರ್ಬರವಾಗಿ ಹತ್ಯೆ ಮಾಡಿರುವುದಾಗಿ ವಿಚಾರಣೆಯ ವೇಳೆ ಆರೋಪಿಗಳು ಘಟನೆಯ ಭೀಕರತೆಯನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ‌.

ಆರೋಪಿಗಳನ್ನಿ ನಾರಾಯಣ ಮಾಳಿ ಹಾಗೂ ಹುಸೇನ್ ಎಂದು ಗುರುತಿಸಲಾಗಿದೆ. ಆರೋಪಿಗಳು ಸ್ವಾಮೀಜಿಯನ್ನು ಹತ್ಯೆ ಮಾಡಿದ ಬಳಿಕ ದೇಹವನ್ನು 9 ತುಂಡುಗಳನ್ನಾಗಿ ಕತ್ತರಿಸಿ, ರಾಯಬಾಗ ತಾಲೂಕಿನ ಖಟಕಬಾವಿ ಗ್ರಾಮದ ಕಬ್ಬಿನ ಗದ್ದೆಯೊಂದರ ತೆರೆದ ಕೊಳವೆ ಬಾವಿಯಲ್ಲಿ ಹಾಕಿದ್ದಾರೆ. ಶನಿವಾರ ಸತತ 9 ಗಂಟೆಗಳ ಕಾರ್ಯಾಚರಣೆ ನಡೆಸಿದ ಪೊಲೀಸರು, ಮುನಿಗಳ ದೇಹದ ತುಂಡುಗಳನ್ನು ಪತ್ತೆ ಮಾಡಿದ್ದಾರೆ. ಮುನಿಗಳ ಹತ್ಯೆ ಕುರಿತು ಹೇಳಿಕೆ ನೀಡಿರುವ ಸಂಬಂಧಿಕ ಪ್ರದೀಪ್, ಮುನಿಗಳಿಗೆ ಚಿತ್ರಹಿಂಸೆ ನೀಡಿ ಹತ್ಯೆ ಮಾಡಲಾಗಿದೆ. ಮೊದಲಿಗೆ ವಿದ್ಯುತ್ ಶಾಕ್ ನೀಡಿ, ನಂತರ ದೇಹವನ್ನು ತುಂಡುಗಳಾಗಿ ಕತ್ತರಿಸಿದ್ದಾರೆ. ಮುನಿಗಳು ನಾಪತ್ತೆಯಾಗಿದ್ದಾರೆಂದು ಎಲ್ಲರೂ ಹುಡುಕಾಟ ನಡೆಸುತ್ತಿದ್ದಾಗ, ಆರೋಪಿಗಳು ನಮ್ಮ ಜೊತೆಗೇ ಇದ್ದರು ಎಂದು ಹೇಳಿದ್ದಾರೆ.

Also Read  ಕಡಬ: ಜೀಪು-ಸ್ಕೂಟರ್ ನಡುವೆ ಡಿಕ್ಕಿ- ಅಪಘಾತದ ರಭಸಕ್ಕೆ ಜೀಪು ಮೇಲಿಂದ ರಸ್ತೆಗೆ ಎಸೆಯಲ್ಪಟ್ಟ ಯುವತಿ
error: Content is protected !!
Scroll to Top