ಹೊಸ ವಿನ್ಯಾಸದಲ್ಲಿ ಬಿಡುಗಡೆಗೆ ಸಿದ್ಧವಾದ ‘ವಂದೇ ಭಾರತ್’ ರೈಲು – ಹೊಸ ರೈಲಿನ ಫೋಟೋ ಹಂಚಿಕೊಂಡ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್

(ನ್ಯೂಸ್ ಕಡಬ) newskadaba.com ಚೆನ್ನೈ, ಜು.09. ಕೇಂದ್ರ ಸರಕಾರದ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಒಂದಾಗಿರುವ ವಂದೇ ಭಾರತ್ ರೈಲು ಇದೀಗ ಹೊಸ ವಿನ್ಯಾಸದೊಂದಿಗೆ ಹೊರಬರಲಿದ್ದು, ಇದರ ಹೊಸ ನೋಟವನ್ನು ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ವೀಕ್ಷಿಸಿದರು.

ಚೆನ್ನೈ ಸೆಂಟ್ರಲ್ ರೈಲ್ವೆ ನಿಲ್ದಾಣಕ್ಕೆ ಆಗಮಿಸಿದ ಅಶ್ವಿನಿ ವೈಷ್ಣವ್, ಬಳಿಕ ಚೆನ್ನೈನ ಪೆರಂಬೂರ್ ಲಕ್ಷ್ಮೀಪುರಂ ನಲ್ಲಿರುವ ಇಂಟೆಗ್ರಲ್ ಕೋಚ್ ಫ್ಯಾಕ್ಟರಿ (ಐಸಿಎಫ್) ಗೆ ಭೇಟಿ ನೀಡಿ ಹೊಸ ರೈಲನ್ನು ಪರಿಶೀಲಿಸಿದರು. ಹೊಸ ರೈಲಿನಲ್ಲಿ ತಾಂತ್ರಿಕವಾಗಿ ಮತ್ತು ವಿನ್ಯಾಸದಲ್ಲಿ ಹಲವು ಸುಧಾರಣೆಗಳನ್ನು ಮಾಡಲಾಗಿದ್ದು, ನೀಲಿ – ಬಿಳಿ ಬಣ್ಣಕ್ಕೆ ಬದಲಾಗಿ ಕೇಸರಿ – ಬಿಳಿ ಬಣ್ಣವನ್ನು ಬಳಿಯಲಾಗಿದೆ. ಈ ಬಗ್ಗೆ ಅವರು ಅಧಿಕೃತ ಟ್ವಿಟರ್ ನಲ್ಲಿ ಫೋಟೊವನ್ನು ಹಂಚಿಕೊಂಡಿದ್ದಾರೆ.

Also Read  ಏಕಾಏಕಿ ಚಲಿಸಲಾರಂಭಿಸಿದ ಬೆಂಕಿ ಹೊತ್ತಿ ಉರಿಯುತ್ತಿದ್ದ ಕಾರು- ವಿಡಿಯೋ ವೈರಲ್..!
error: Content is protected !!
Scroll to Top