(ನ್ಯೂಸ್ ಕಡಬ) newskadaba.com ರಾಜಸ್ಥಾನ, ಜು.09. ಪತಿಯು ಪರ ಸ್ತ್ರೀಯೊಂದಿಗೆ ಅಕ್ರಮ ಸಂಬಂಧ ಹೊಂದಿರುವುದನ್ನು ರೆಡ್ ಹ್ಯಾಂಡ್ ಆಗಿ ಹಿಡಿದ ಮಹಿಳೆಯೋರ್ವರು ತನ್ನಿಬ್ಬರು ಮಕ್ಕಳ ಜೊತೆ ಗೂಡ್ಸ್ ರೈಲಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ರಾಜಸ್ಥಾನದ ಜೋಧಪುರದಲ್ಲಿ ನಡೆದಿದೆ.

ತವರಿಗೆ ತೆರಳಿದ್ದ ಪತ್ನಿಯು ಪತಿಯ ಹುಟ್ಟುಹಬ್ಬಕ್ಕೆ ಶುಭಾಶಯ ತಿಳಿಸಲೆಂದು ಕರೆ ಮಾಡಿದಾಗ ಕರೆ ಸ್ವೀಕರಿಸಲಿಲ್ಲವೆಂದು ನೇರವಾಗಿ ಮನೆಗೆ ಆಗಮಿಸಿದ ವೇಳೆ ತನ್ನ ಪತಿಯು ಬೇರೆ ಮಹಿಳೆಯೊಂದಿಗೆ ಚಕ್ಕಂದವಾಡುತ್ತಿದ್ದ ಎನ್ನಲಾಗಿದೆ. ಇದರಿಂದ ರೋಸಿ ಹೋದ ಪತ್ನಿಯು ತಕ್ಷಣವೇ ತನ್ನ ಮೊಬೈಲ್ ನಲ್ಲಿ ಪತಿಯ ರಾಸಲೀಲೆಯ ವೀಡಿಯೋ ಮಾಡಿ ತನ್ನ ಅತ್ತೆಗೆ ಕಳುಹಿಸಿಕೊಟ್ಟಿದ್ದಾಳೆ. ಇಷ್ಟಕ್ಕೆ ನಿಲ್ಲಿಸದ ಆಕೆ ತನ್ನ ಇಬ್ಬರು ಪುಟ್ಟ ಮಕ್ಕಳ ಜೊತೆ ಚಲಿಸುತ್ತಿದ್ದ ಗೂಡ್ಸ್ ರೈಲಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
