(ನ್ಯೂಸ್ ಕಡಬ) newskadaba.com ಮುಂಬಯಿ, ಜು.09. ವೃತ್ತಿಯಲ್ಲಿ ಭಿಕ್ಷುಕನಾಗಿರುವ ಮುಂಬಯಿಯ ವ್ಯಕ್ತಿಯೋರ್ವ ಸುಮಾರು 7.5 ಕೋಟಿ ಸಂಪಾದಿಸುವ ಮೂಲಕ ವಿಶ್ವದಲ್ಲೇ ಅತೀ ಶ್ರೀಮಂತ ಭಿಕ್ಷುಕ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.

ಮುಂಬಯಿ ನಿವಾಸಿಯಾಗಿರುವ ಭರತ್ ಜೈನ್ ಎಂಬಾತ ಬಡತನದಿಂದಾಗಿ ಪ್ರಾಥಮಿಕ ಶಿಕ್ಷಣವನ್ನೂ ಪಡೆಯಲು ಸಾಧ್ಯವಾಗದೆ ಭಿಕ್ಷಾಟನೆ ವೃತ್ತಿಗಿಳಿದಿದ್ದು, ಆ ಬಳಿಕ ಅದೇ ವೃತ್ತಿಯನ್ನು ಮುಂದುವರಿಸಿದ್ದಾರೆ ಎಂದು ಪ್ರಸಿದ್ಧ ಆಂಗ್ಲ ಪತ್ರಿಕೆಯೊಂದು ವರದಿ ಮಾಡಿದೆ. ಇಂದು ಕೋಟಿ ಆಸ್ತಿಯ ಒಡೆಯನಾಗಿರುವ ಭರತ್ ಜೈನ್, 1.2 ಕೋಟಿಯ ಫ್ಲ್ಯಾಟನ್ನು ಹೊಂದಿದ್ದು, ಎರಡು ವಾಣಿಜ್ಯ ಕಟ್ಟಡವನ್ನು ಹೊಂದಿದ್ದಾರೆ.

ತನ್ನ ಮಕ್ಕಳನ್ನು ಕಾನ್ವೆಂಟ್ ಶಾಲೆಯಲ್ಲಿ ಓದಿಸಿರುವ ಭರತ್, ಭಿಕ್ಷಾಟನೆಯನ್ನು ಮುಂದುವರಿಸಿದ್ದು, ಈಗಲೂ ಛತ್ರಪತಿ ಶಿವಾಜಿ ಟರ್ಮಿನಲ್ ರೈಲು ನಿಲ್ದಾಣ ಅಥವಾ ಅಜಾದ್ ಮೈದಾನದ ಬಳಿ ಭಿಕ್ಷೆ ಬೇಡುತ್ತಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
