ಆ. 15ರ ಸ್ವಾತಂತ್ರ್ಯೋತ್ಸವ ಸಮಾರಂಭಕ್ಕೆ ಉಡುಪಿಯ ದಂಪತಿಗೆ ಆಹ್ವಾನ

(ನ್ಯೂಸ್ ಕಡಬ) newskadaba.com ಸಿದ್ದಾಪುರ, ಜು. 08. ಆ. 15ರಂದು ದೆಹಲಿಯಲ್ಲಿ ನಡೆಯಲಿರುವ ಸ್ವಾತಂತ್ರೋತ್ಸವದ ಧ್ವಜಾರೋಹಣ ಸಮಾರಂಭಕ್ಕೆ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಸಿದ್ದಾಪುರದ ಕೆಳಪೇಟೆ ಸೂರ ಪೂಜಾರಿ ಮತ್ತು ಗಿರಿಜಾ ಪೂಜಾರಿ ದಂಪತಿಗೆ ಕೇಂದ್ರ ಸರಕಾರದ ಪ್ರಧಾನಮಂತ್ರಿ ಸಚಿವಾಲಯವು ಆಮಂತ್ರಣ ನೀಡಿದೆ.

ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯ ಅಮೃತ ಸರೋವರ ಯೋಜನೆಯಲ್ಲಿ ಸಿದ್ದಾಪುರ ಗ್ರಾಮದ ಬ್ರಹ್ಮಕೆರೆಯನ್ನು 100 ದಿನದಲ್ಲಿ ಮಾನವ ಶ್ರಮದ ಮೂಲಕ ಹೂಳೆತ್ತುವ ಕಾರ್ಯವನ್ನು ಇವರು ಮಾಡಿದ್ದರು. ರಾಜ್ಯದ 34 ಜಿಲ್ಲೆಗಳಲ್ಲಿ ಈ ಯೋಜನೆ ಜಾರಿ ಮಾಡಿದ್ದು, 6 ದಂಪತಿಗಳು ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದೆನ್ನಲಾಗಿದೆ.

Also Read  ಹೌಸ್ ಬೋಟ್ ಮುಳುಗಡೆ..! ➤ ಮಕ್ಕಳು ಸೇರಿ 21 ಮಂದಿ ಮೃತ್ಯು
error: Content is protected !!
Scroll to Top