(ನ್ಯೂಸ್ ಕಡಬ) newskadaba.com ಬೆಂಗಳೂರು, ಜು.07. ತುಳುವರು ಎಲ್ಲಿ ಹೋದರೂ, ಯಾವುದೇ ಸ್ಥಾನಕ್ಕೆ ತಲುಪಿದರೂ ತಮ್ಮ ಮಾತೃಭಾಷೆ ತುಳುವನ್ನು ಮಾತನಾಡದೆ ಇರಲ್ಲ ಎನ್ನುವುದಕ್ಕೆ ವಿಧಾನಸಭೆ ಕೂಡಾ ಸಾಕ್ಷಿಯಾಗಿದೆ.

ವಿಧಾನಸಭೆಯಲ್ಲಿ ಆಡಳಿತ ಪಕ್ಷ ಹಾಗೂ ಪ್ರತಿಪಕ್ಷಗಳ ಆರೋಪ ಪ್ರತ್ಯಾರೋಪವನ್ನು ನಿಯಂತ್ರಿಸುವ ಸಲುವಾಗಿ ಸಭಾಧ್ಯಕ್ಷ ಯು.ಟಿ. ಖಾದರ್, ಎದ್ದು ನಿಂತಿದ್ದ ಶಾಸಕರನ್ನು ಕುಳಿತುಕೊಳ್ಳುವಂತೆ ಸೂಚಿಸುವ ವೇಳೆ ತುಳುವಿನಲ್ಲಿ ಹೇಳಿ ತುಳುವರು ಎಂದೂ ಮಾತೃಭಾಷೆಯನ್ನು ಬಿಟ್ಟುಕೊಡಲ್ಲ ಎಂಬುವುದನ್ನು ಸಾಬೀತುಪಡಿಸಿದರು. ನೀವು ಕುಳಿತುಕೊಳ್ಳಿ, ನೀವು ಕುಳಿತುಕೊಳ್ಳಿ ಎಂದು ಹೇಳುತ್ತಿದ್ದ ಸ್ಪೀಕರ್ ಯು.ಟಿ.ಖಾದರ್ ಮಧ್ಯದಲ್ಲಿ ‘ಆಯಡ ಪನ್ಲೆ’ ಎಂದು ತುಳುವಿನಲ್ಲಿ ಹೇಳಿದ್ದು, ಟ್ರೋಲರ್ ಗಳ ಬಾಯಿಗೆ ಆಹಾರವಾಗಿದೆ. ತುಳುವರು ಎಲ್ಲಿ ಹೋದರೂ ತಮ್ಮ ಮಾತೃಭಾಷೆಯನ್ನು ಬಿಡಲ್ಲ ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ.

