(ನ್ಯೂಸ್ ಕಡಬ) newskadaba.com ಉಳ್ಳಾಲ, ಜು. 05. ಮನೆ ಗೋಡೆ ಕುಸಿದು ಮನೆಮಂದಿ ಪವಾಡಸದೃಶವಾಗಿ ಪಾರಾದ ಘಟನೆ ಉಳ್ಳಾಲದ ಕೋಟೆಪುರದಲ್ಲಿ ಸಂಭವಿಸಿದೆ.

ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಉಮರಬ್ಬ ಎಂಬವರ ಮನೆಮಂದಿ ಮನೆಯೊಳಗಿರುವಾಗಲೇ ಗೋಡೆ ಕುಸಿದಿದೆ. ತಕ್ಷಣವೇ ಮನೆಮಂದಿ ಹೊರ ನಡೆದಿದ್ದು, ಪವಾಡಸದೃಶವಾಗಿ ಪಾರಾಗಿದ್ದಾರೆ. ಘಟನಾ ಸ್ಥಳಕ್ಕೆ ನಗರಸಭೆ ಅಧಿಕಾರಿಗಳು ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದಾರೆ.
