(ಮ್ಯೂಸ್ ಕಡಬ) newskadaba.com ಪುತ್ತೂರು, ಜು. 05. ಪುತ್ತೂರು ನಗರ ಪೊಲೀಸ್ ಠಾಣೆ, ಪುತ್ತೂರು ಮಹಿಳಾ ಪೊಲೀಸ್ ಠಾಣೆ, ವಿಟ್ಲ, ಸುಳ್ಯ, ಬಂಟ್ವಾಳ ಸಹಿತ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳ ಎಸ್.ಐ ಗಳನ್ನು ವರ್ಗಾವಣೆ ಮಾಡಿ ಪಶ್ಚಿಮ ವಲಯ ಪೊಲೀಸ್ ಉಪ ಮಹಾನಿರೀಕ್ಷಕರು ಆದೇಶ ಹೊರಡಿಸಿದ್ದಾರೆ.

ಪುತ್ತೂರು ನಗರ ಪೊಲೀಸ್ ಠಾಣೆಯ ಎಸ್.ಐ ಸರಸ್ವತಿ ಬಿ.ಟಿ.ಅವರನ್ನು ಸುಳ್ಯಕ್ಕೆ, ಪುತ್ತೂರು ಮಹಿಳಾ ಠಾಣೆಯ ಎಸ್.ಐ ಸೇಸಮ್ಮ ಕೆ.ಎಸ್ ಅವರನ್ನು ಪುತ್ತೂರು ನಗರ ಠಾಣೆಗೆ, ವಿಟ್ಲ ಠಾಣೆಯ ಎಸ್.ಐ ರುಕ್ಮ ನಾಯ್ಕ್ ಅವರನ್ನು ಉಪ್ಪಿನಂಗಡಿ ಠಾಣೆಗೆ, ಸುಳ್ಯದ ರತ್ನ ಕುಮಾರ್ ಅವರನ್ನು ವಿಟ್ಲ ಪೊಲೀಸ್ ಠಾಣೆಗೆ, ಬೆಳ್ಳಾರೆ ಠಾಣೆಯ ಎಸ್.ಐ ಶಿವಕುಮಾರ್ ಅವರನ್ನು ಮುರುಡೇಶ್ವರಕ್ಕೆ, ಬಂಟ್ವಾಳ ಎಸ್ಐ ಧನರಾಜ್ ಅವರನ್ನು ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣೆಗೆ, ಬಂಟ್ವಾಳ ಗ್ರಾಮಾಂತರ ಠಾಣೆಯ ಅಕ್ಷಯ ಡವಗಿ ಅವರನ್ನು ಕಡಬ ಠಾಣೆಗೆ, ಬಂಟ್ವಾಳದ ಸಂಜೀವ.ಕೆ ಅವರನ್ನು ಬಂಟ್ವಾಳ ಸಂಚಾರ ಪೊಲೀಸ್ ಠಾಣೆಗೆ ಹಾಗೂ ಬಂಟ್ವಾಳದ ಮೂರ್ತಿ ಅವರನ್ನು ಬಂಟ್ವಾಳ ಗ್ರಾಮಾಂತರ ಠಾಣೆಗೆ ವರ್ಗಾಣೆಗೊಳಿಸಿ ಪಶ್ಚಿಮ ವಲಯ ಪೊಲಿಸ್ ಉಪ ಮಹಾನಿರೀಕ್ಷಕ ಡಾ.ಚಂದ್ರಗುಪ್ತ ಅವರು ಆದೇಶ ಹೊರಡಿಸಿದ್ದಾರೆ.
