(ನ್ಯೂಸ್ ಕಡಬ) newskadaba.com ಮಂಗಳೂರು, ಜು. 05. ಹುಡುಗಿಯ ಹೆಸರಿನಲ್ಲಿ ಇನ್ಸ್ಟಾಗ್ರಾಂ ಖಾತೆ ಸೃಷ್ಟಿಸಿ ಹಣ ಪಡೆದು ಬಳಿಕ ವಂಚಿಸಿರುವ ಕುರಿತು ನಗರದ ಸೆನ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಇನ್ ಸ್ಟಾಗ್ರಾಂ ಖಾತೆಯ ಮೂಲಕ ಪರಿಚಯ ಮಾಡಿಕೊಂಡ ಅಪರಿಚಿತ ವ್ಯಕ್ತಿಯೋರ್ವ ತನ್ನ ಹೆಸರು ನಿಹಾರಿಕಾ (nihari-kaaa) ಎಂದು ಪರಿಚಯಿಸಿಕೊಂಡಿದ್ದು, ಬೇಕರಿಯಲ್ಲಿ ತಾಯಿಯ ಬ್ಯಾಂಕ್ ಖಾತೆಯಿಂದ ಹಣ ಪಾವತಿಸಲು ಅಸಾಧ್ಯವಾಗಿರುವುರಿಂದ 3800 ರೂ. ವರ್ಗಾಯಿಸುವಂತೆ ಕ್ಯೂಆರ್ ಕೋಡ್ ಕಳುಹಿಸಿದ್ದ. ಅದನ್ನು ನಂಬಿದ ಫಿರ್ಯಾದಿದಾರರು ಹಣ ಪಾವತಿಸಿದ್ದರು.

ಬಳಿಕ ತಾನು ಅಪಘಾತಕ್ಕೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿದ್ದು 28,000 ರೂ. ನೀಡುವಂತೆ ತಿಳಿಸಿದಲ್ಲದೇ ಮತ್ತೆ ಆಸ್ಪತ್ರೆ ಖರ್ಚಿಗೆ ಹಣ ಬೇಕೆಂದು ಕೇಳಿ ಹಂತ ಹಂತವಾಗಿ ಒಟ್ಟು 98,700 ರೂ.ಗಳನ್ನು ವರ್ಗಾಯಿಸಿ ವಂಚಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
