ಹಾಸನ: ಹಾಡಹಗಲೇ ರೌಡಿಶೀಟರ್ ನ ಬರ್ಬರ ಹತ್ಯೆ

(ನ್ಯೂಸ್ ಕಡಬ) newskadaba.com ಹಾಸನ, ಜು. 04. ಹಾಡಹಗಲೇ ರೌಡಿಶೀಟರ್ ಓರ್ವನನ್ನು ರಸ್ತೆಯಲ್ಲಿ ಅಟ್ಟಾಡಿಸಿ ಕೊಲೆ ಮಾಡಿರುವ ಘಟನೆ ಚನ್ನರಾಯಪಟ್ಟಣದ ಧನಲಕ್ಷ್ಮಿ ಚಿತ್ರ ಮಂದಿರದ ಎದುರು ಮಂಗಳವಾರದಂದು ಸಂಜೆ ವರದಿಯಾಗಿದೆ.

ಹತ್ಯೆಗೀಡಾದವರನ್ನು ಮಾಸ್ತಿಗೌಡ ಅಲಿಯಾಸ್ ಕೃಷ್ಣ (30) ಎಂದು ಗುರುತಿಸಲಾಗಿದೆ.

ಕಾರಿನಲ್ಲಿ ಬಂದ ದುಷ್ಕರ್ಮಿಗಳು, ಕೃಷ್ಣನನ್ನು ಬೆನ್ನಟ್ಟಿ, ಆತ ಓಡಲು ಪ್ರಾರಂಭಿಸುತ್ತಿದ್ದಂತೆಯೇ ನಡುರಸ್ತೆಯಲ್ಲಿ ಅಟ್ಟಾಡಿಸಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದಿದ್ದಾರೆ ಎಂದು ಹೇಳಲಾಗಿದೆ. ಘಟನೆಯಿಂದ ಕೃಷ್ಣನ ತಲೆ ಸೇರಿದಂತೆ ದೇಹದ ವಿವಿಧ ಭಾಗಳಿಗೆ ಗಂಭೀರ ಗಾಯಗಳಾಗಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.

Also Read  ಆಸ್ಪತ್ರೆಯಿಂದ ಪರಾರಿಯಾದ ಆರೋಪಿ ಅರೆಸ್ಟ್..!
error: Content is protected !!
Scroll to Top