ಲೈನ್ ನಿಷ್ಕ್ರಿಯಗೊಳಿಸಲು ಲಂಚ ಪಡೆದ ಲೈನ್ ಮ್ಯಾನ್- ಲೋಕಾಯುಕ್ತ ಬಲೆಗೆ

(ನ್ಯೂಸ್ ಕಡಬ) newskadaba.com ಬೈಂದೂರು, ಜು. 04. ಲಂಚ ಸ್ವೀಕರಿಸುತ್ತಿದ್ದ ವೇಳೆ ದಾಳಿ ನಡೆಸಿದ ಲೋಕಾಯುಕ್ತ ಅಧಿಕಾರಿಗಳು ಮೆಸ್ಕಾಂ ಲೈನ್ ಮ್ಯಾನ್ ಓರ್ವರನ್ನು ವಶಕ್ಕೆ ಪಡೆದ ಘಟನೆ ಬೈಂದೂರಿನಲ್ಲಿ ನಡೆದಿದೆ.

ಬಂಧಿತರನ್ನು ರಮೇಶ್ ಬಡಿಗೇರ ಎಂದು ಗುರುತಿಸಲಾಗಿದೆ.

ಕುಸುಮಾ ಎಂಬವರು ಲೈನ್ ಮ್ಯಾನ್ ರಮೇಶ್ ಅವರೊಂದಿಗೆ ಮರ ಕಡಿಯಲು ಲೈನ್ ನಿಷ್ಕ್ರಿಯಗೊಳಿಸುವಂತೆ ಮನವಿ ಮಾಡಿದ್ದು, ಈ ಸಂದರ್ಭ ರಮೇಶ್ 2,000 ರೂಪಾಯಿ ಲಂಚ ಸ್ವೀಕರಿಸುತ್ತಿದ್ದ. ಈ ವೇಳೆ ಡಿವೈಎಸ್ ಪಿ ಪ್ರಕಾಶ್, ಇನ್ಸ್ ಪೆಕ್ಟರ್ ಜಯರಾಮ್ ಗೌಡ ಅವರ ತಂಡ ಕಾರ್ಯಾಚರಣೆ ನಡೆಸಿ ಆತನನ್ನು ವಶಕ್ಕೆ ಪಡೆದಿದ್ದಾರೆ.

Also Read  ತಡ ರಾತ್ರಿ ಮುಂಬೈನಿಂದ ಬೆಂಗಳೂರಿಗೆ ಅನರ್ಹ ಶಾಸಕರ ಆಗಮನ
error: Content is protected !!
Scroll to Top