(ನ್ಯೂಸ್ ಕಡಬ)newskadaba.com ಮುಂಬೈ, ಜು. 04. ನಟ ಶಾರುಖ್ ಖಾನ್ ರವರಿಗೆ ಶೂಟಿಂಗ್ ವೇಳೆ ಪೆಟ್ಟು ಬಿದ್ದಿರುವ ಘಟನೆ ನಡೆದಿದೆ.

ಲಾಸ್ ಏಂಜಲೀಸ್‌ನಲ್ಲಿ ಬಹಿರಂಗವಾಗದಿರುವ ಪ್ರಾಜೆಕ್ಟ್ ವೊಂದರ ಶೂಟಿಂಗ್ ನಲ್ಲಿರುವಾಗ ನಟ ಶಾರುಖ್ ಖಾನ್ ಅವರ ಮೂಗಿಗೆ ಪೆಟ್ಟು ಬಿದ್ದಿದೆ, ತಕ್ಷಣ ಚಿತ್ರತಂಡದವರು ಅವರನ್ನು ಆಸ್ಪತ್ರೆ ದಾಖಲಿಸಿದ್ದಾರೆ. ಆಸ್ಪತ್ರೆಯಲ್ಲಿ ರಕ್ತ ನಿಲ್ಲಲು ಶಸ್ತ್ರಚಿಕಿತ್ಸೆಯನ್ನು ಮಾಡಿ, ಯಾವುದೇ ಹೆದರುವ ಅವಶ್ಯಕತೆಯಿಲ್ಲ ಎಂದು ಬ್ಯಾಂಡೇಜ್ ಹಾಕಿ ಕಳುಹಿಸಿದ್ದಾರೆ.ಸದ್ಯ ಇವರು ತಮ್ಮ ನಿವಾಸದಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.
