(ನ್ಯೂಸ್ ಕಡಬ)newskadaba.com ಬೆಂಗಳೂರು, ಜು. 4. ಕಾಂಗ್ರೆಸ್ ಸರ್ಕಾರದ ವಿರುದ್ದ ಹೆಚ್ ಡಿ ಕುಮಾರಸ್ವಾಮಿ ಭ್ರಷ್ಟಾಚಾರದ ಆರೋಪಕ್ಕೆ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ತಿರುಗೇಟು ನೀಡಿದ್ದಾರೆ.
ಈ ಕುರಿತು ವಿಧಾನಸೌಧದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಡಿಕೆಶಿ , ಕುಮಾರಸ್ವಾಮಿಯವರು ಚುನಾವಣೆಯಲ್ಲಿ ಕಡಿಮೆ ಸ್ಥಾನ ಬಂದಿದೆ ಎಂಬ ಬೇಸರದಲ್ಲಿ ಈ ರೀತಿ ಮಾತನಾಡುತ್ತಿದ್ದಾರೆ, ಅವರ ಮಾತುಗಳನ್ನು ನಾವು ತಲೆಕೆಡಿಸಿಕೊಳ್ಳುವುದಿಲ್ಲ ಎಂದಿದ್ದಾರೆ.ಸರ್ಕಾರದ ಯಾವುದೇ ಕಚೇರಿಯಲ್ಲಿ ಪಿಂಚಣಿ ಪಡೆದು ಕೆಲಸ ನೀಡಲಾಗುತ್ತಿಲ್ಲ, ಸಿಎಂ ಕಛೇರಿಯಲ್ಲಿ ಯಾವ ಧಂದೆಯೂ ನಡೆಯುತ್ತಿಲ್ಲ, ಅವರ ಬಳಿ ದಾಖಲೆ ಇದ್ದರೆ ಲೋಕಾಯುಕ್ತ ಅಧಿಕಾರಿಗಳಿಗೆ ದೂರು ನೀಡಲಿ ತನಿಖೆ ಮಾಡಿಸಲಿ ಎಂದು ತಿರುಗೇಟು ನೀಡಿದ್ದಾರೆ.ಇದೇ ವೇಳೆ ಗುರು ಪೂರ್ಣಿಮೆಗೆ ಭಗವದ್ಗೀತೆಯನ್ನು ಪಠಿಸಲು ಟೆಕ್ಸಾಸ್‌ನಲ್ಲಿ ಸೇರಿದ 10,000 ಜನ ಕಾಂಗ್ರೆಸ್ ಗ್ಯಾರಂಟಿ ವಿರುದ್ಧ ಯಡಿಯೂರಪ್ಪ ರವರು ಪ್ರತಿಭಟನೆ ವಿಚಾರಣವಾಗಿ ಮಾತನಾಡಿ, ಯಡಿಯೂರಪ್ಪರವರಿಗೆ ಒಳ್ಳೆಯದಾಗ್ಲಿ, ಪ್ರತಿಭಟನೆ ಮೂಲಕ ಕಾಂಗ್ರೆಸ್ ಸರ್ಕಾರದ ಯೊಜನೆಗಳನ್ನು ಪ್ರಚಾರ ಮಾಡುತ್ತಿದ್ದಾರೆ ಎಂದು ಹೇಳಿದರು. ಜನರಿಗೆ ಮಾತು ಕೊಟ್ಟ ಹಾಗೆ ಅದನ್ನು ಜಾರಿ ಗೊಳಿಸಿದ್ದೇವೆ, ನಾವು ಏನು ಅನಾಹುತ ಮಾಡಿದ್ದೇವೆ ಎಂದು ಪ್ರತಿಭಟನೆ ಮಾಡುತ್ತಾರೆ ಎಂದು ವಾಗ್ದಾಳಿ ನಡೆಸಿದ್ದಾರೆ. ಜನರು ಯಡಿಯೂರಪ್ಪರವರಿಗೆ ರೆಸ್ಟ್ ಕೊಟ್ಟಿದ್ದಾರೆ, ಸದ್ಯ ಅವರು ವಿಶ್ರಾಂತಿಯನ್ನು ಮಾಡಿಲಿ ಎಂದು ಹೇಳಿದರು.