(ನ್ಯೂಸ್ ಕಡಬ) newskadaba.com ಪುತ್ತೂರು, ಜು. 04. ಮಾದಕ ವಸ್ತು ಸೇವಿಸಿ ನಶೆಯಲ್ಲಿದ್ದ ವ್ಯಕ್ತಿಯೋರ್ವನನ್ನು ಪುತ್ತೂರು ನಗರ ಠಾಣೆಯ ಪೊಲೀಸರು ವಶಕ್ಕೆ ಪಡೆದ ಘಟನೆ ಕಿಲ್ಲೆ ಮೈದಾನದ ಪುರಭವನದ ಬಳಿ ಸಂಭವಿಸಿದೆ.

ಬಂಧಿತನನ್ನು ಕೆಯ್ಯೂರು ಕಟ್ಟತ್ತಾರು ನಿವಾಸಿ ಮಹಮ್ಮದ್ ಅಶ್ರಫ್(31) ಎಂದು ಗುರುತಿಸಲಾಗಿದೆ. ಈತ ಕಿಲ್ಲೆ ಮೈದಾನದ ಪುರಭವನದ ಬಳಿ ಮಾದಕ ವಸ್ತು ಸೇವಿಸಿ ನಶೆಯಲ್ಲಿರುವ ಕುರಿತು ಬಂದ ಮಾಹಿತಿಯಂತೆ ಪುತ್ತೂರು ನಗರ ಠಾಣಾ ಎಸ್.ಐ ಶ್ರೀಕಾಂತ್ ರಾಥೋಡ್ ಅವರು ಆರೋಪಿಯನ್ನು ವಿಚಾರಿಸಿ ಸರಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೊಳಪಡಿಸಿದಾಗ ಆತ ಮಾದಕ ವಸ್ತು ಸೇವಿಸಿರುವುದು ದೃಢಪಟ್ಟ ಹಿನ್ನೆಲೆ ಆತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
