ಇಂದು ಕಡಬದಲ್ಲಿ ರಕ್ತದಾನ ಶಿಬಿರ, ರಕ್ತವರ್ಗೀಕರಣ, ಮಧುಮೇಹ ಪರೀಕ್ಷೆ

(ನ್ಯೂಸ್ ಕಡಬ) newskadaba.com ಕಡಬ, ಜ.26. ಕದಂಬ- ಸಾಮಾಜಿಕ ಹಿತರಕ್ಷಣಾ ಸಂಘಟನೆಯ 4ನೇ ವರ್ಷದ ಪಾದಾರ್ಪಣೆ ಹಾಗೂ ಗೌರವ ಸಲಹೆಗಾರ ದಿ.ಗೋಪಾಲ ರಾವ್‍ರವರ ಸ್ಮರಣಾರ್ಥ ಇಂದು ಕಡಬದಲ್ಲಿ ರಕ್ತದಾನ ಶಿಬಿರ ನಡೆಯಲಿದೆ‌.

ಮಂಗಳೂರಿನ ಇಂಡಿಯನ್ ರೆಡ್‍ಕ್ರಾಸ್ ಸೊಸೈಟಿ ರಕ್ತನಿಧಿ ಮತ್ತು ಲೇಡಿಗೋಷನ್ ಆಸ್ಪತ್ರೆಯ ಸಹಯೋಗದಲ್ಲಿ ನಡೆಯಲಿರುವ ರಕ್ತದಾನ ಶಿಬಿರ ಹಾಗೂ ಕಡಬ ಸ್ವಸ್ತ್ಯ ಕ್ಲಿನಿಕಲ್ ಲ್ಯಾಬೊರೇಟರಿ ಸಹಕಾರದೊಂದಿಗೆ ರಕ್ತವರ್ಗೀಕರಣ ಮತ್ತು ಮಧುಮೇಹ ಪರೀಕ್ಷೆ ಜನವರಿ 26 ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 2.30ರ ತನಕ ಕಡಬ ಬಾಬು ಮತ್ತು ಭಾಗೀರಥಿ ಟವರ್ಸ್‍ನ ವಠಾರದಲ್ಲಿ ನಡೆಯಲಿದೆ ಎಂದು ಸಂಘಟನೆ ಅಧ್ಯಕ್ಷ ಕೆ.ಸೀತಾರಾಮ ಗೌಡ ತಿಳಿಸಿದ್ದಾರೆ.

Also Read  ಕುಂದಾಪುರ :ಮಿನಿ ಟಿಪ್ಪರ್ ಕದ್ದು ಪರಾರಿಯಾದ ಚಾಲಕನ ಬಂಧನ

error: Content is protected !!
Scroll to Top