(ನ್ಯೂಸ್ ಕಡಬ) newskadaba.com ರಾಮಕುಂಜ, ಜು. 04. ವಿದ್ಯುತ್ ತಂತಿ ಮೇಲೆ ಬಿದ್ದಿದ್ದ ಗೆಲ್ಲನ್ನು ತೆರವು ಮಾಡುತ್ತಿದ್ದ ವೇಳೆ ವಿದ್ಯುತ್ ಶಾಕ್ ಉಂಟಾಗಿ ವ್ಯಕ್ತಿಯೋರ್ವರು ಗಾಯಗೊಂಡಿರುವ ಘಟನೆ ಕೊಯಿಲ ಗ್ರಾಮದ ಏಣಿತ್ತಡ್ಕದಲ್ಲಿ ನಡೆದಿದೆ.

ಗಾಯಗೊಂಡವರನ್ನು ಕುಂದಾಪುರ ಮೂಲದ ರವೀಂದ್ರ(30) ಎಂದು ಗುತುತಿಸಲಾಗಿದೆ. ಕೊಯಿಲ ಗ್ರಾಮದ ಏಣಿತ್ತಡ್ಕ ಎಂಬಲ್ಲಿ ವಿದ್ಯುತ್ ತಂತಿ ಮೇಲೆ ಮರದ ಗೆಲ್ಲೊಂದು ಬಿದ್ದ ಪರಿಣಾಮ ಟ್ರಿಪ್ ಆಗಿದ್ದರಿಂದ ಸ್ಥಳಕ್ಕೆ ತೆರಳಿದ್ದ ರವೀಂದ್ರ ಅವರು ಕೊಕ್ಕೆಯ ಸಹಾಯದಿಂದ ವಿದ್ಯುತ್ ತಂತಿ ಮೇಲಿದ್ದ ಗೆಲ್ಲು ತೆರವುಗೊಳಿಸುತ್ತಿದ್ದ ವೇಳೆ ವಿದ್ಯುತ್ ಪ್ರವಹಿಸಿ ಶಾಕ್‌ಗೆ ಒಳಗಾಗಿದ್ದಾರೆ. ಘಟನೆಯಿಂದ ಗಂಭೀರ ಗಾಯಗೊಂಡಿರುವ ರವೀಂದ್ರ ಅವರು ಮಂಗಳೂರು ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವರದಿಯಾಗಿದೆ.
