(ನ್ಯೂಸ್ ಕಡಬ) newskadaba.com ಸುಳ್ಯ, ಜು. 03. ಮನೆಯಲ್ಲಿ ಯಾರೂ ಇಲ್ಲದ ಸಂದರ್ಭ ಮನೆಯ ಬೀಗ ಮುರಿದು ಒಳನುಗ್ಗಿರುವ ಕಳ್ಳರು, ಸಾವಿರಾರು ರೂ. ನಗದು ಕದ್ದೊಯ್ದ ಘಟನೆ ತಾಲೂಕಿನ ಜಾಲ್ಸೂರು ಗ್ರಾಮದ ಅಡ್ಕಾರು ಎಂಬಲ್ಲಿಂದ ವರದಿಯಾಗಿದೆ.

ಅಡ್ಕಾರು ನಿವಾಸಿ ಮುಹಮ್ಮದ್ ನಜೀಬ್ ಅವರು ಜು. 01ರಂದು ಸಂಜೆ ತಮ್ಮ ಹೆಂಡತಿಯ ತವರು ಮನೆಗೆ ಬೀಗ ಹಾಕಿ ಕುಟುಂಬ ಸಮೇತ ತೆರಳಿದ್ದರೆನ್ನಲಾಗಿದೆ. ಮರುದಿನ ಜು. 02ರಂದು ಬೆಳಿಗ್ಗೆ ಪುತ್ತೂರಿನಿಂದ ಮರಳಿ ಮನೆಗೆ ಬಂದಾಗ ಮನೆಯ ಬಾಗಿಲಿನ ಲಾಕ್ ಮುರಿದಿದ್ದು, ಒಳಗೆ ಹೋಗಿ ನೋಡಿದಾಗ ಮನೆಯ ಕಪಾಟಿನಲ್ಲಿರಿಸಲಾಗಿದ್ದ ಸುಮಾರು ತೊಂಬತ್ತೈದು ಸಾವಿರ ರೂ. ನಗದನ್ನು ಕಳವುಗೈಯಲಾಗಿತ್ತು. ಮನೆಯಲ್ಲಿ ಯಾರೂ ಇಲ್ಲದ ವೇಳೆ ಕಳ್ಳರು ಈ ಕೃತ್ಯವೆಸಗಿದ್ದಾರೆ. ಘಟನಾ ಸ್ಥಳಕ್ಕೆ ತೆರಳಿದ ಪೊಲೀಸರು, ಪರಿಶೀಲನೆ ನಡೆಸಿ, ಮನೆ ಮಾಲಕ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ. ಇತ್ತೀಚೆಗಷ್ಟೇ ಅಡ್ಕಾರಿನಲ್ಲಿ ಇನ್ನೆರಡು ಮನೆಗಳಲ್ಲಿ ಕಳ್ಳತನ ಪ್ರಕರಣ ನಡೆದಿತ್ತು.
