ಪ್ರಚೋದನಾತ್ಮಕ ಭಾಷಣ ಮಾಡಿದ ಆರೋಪ ► ಕಾರ್ಕಳ ಶಾಸಕರ ವಿರುದ್ಧ ಕ್ರಮಕ್ಕೆ ಕಡಬ ಬ್ಲಾಕ್ ಕಾಂಗ್ರೆಸ್ ಆಗ್ರಹ

( ನ್ಯೂಸ್ ಕಡಬ) newskadaba.com ಕಡಬ, ಜ.25. ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆ ಬಂಟ್ವಾಳದಲ್ಲಿ ಅಲ್ಲಾಹು-ರಾಮನ ನಡುವಿನ ಸ್ಪರ್ಧೆ ಎಂದು ಸಂವಿಧಾನ ಬಾಹಿರ ಹಾಗೂ ಜನರ ಧಾರ್ಮಿಕ ಭಾವನೆಯನ್ನು ಕೆರಳಿಸುವ ಹೇಳಿಕೆ ನೀಡಿರುವ ಕಾರ್ಕಳ ಶಾಸಕ ಸುನೀಲ್ ಕುಮಾರ್ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಕಡಬ ಬ್ಲಾಕ್ ಕಾಂಗ್ರೆಸ್ ವಕ್ತಾರ ಕೆ.ಎಂ.ಹನೀಫ್ ಆಗ್ರಹಿಸಿದ್ದಾರೆ.

ಸುನೀಲ್‍ಕುಮಾರ್‍ರವರು ಜನರಲ್ಲಿ ಧಾರ್ಮಿಕ ಧ್ವೇಷ ಉಂಟಾಗುವಂತೆ ಮಾತನಾಡಿ ಧರ್ಮಗಳ ಮಧ್ಯೆ ಕಂದಕ ಉಂಟುಮಾಡಿ ಸೌಹಾರ್ದತೆಗೆ ಧಕ್ಕೆ ತರುವಂತಹ ಕೆಲಸ ಮಾಡಿದ್ದಾರೆ. ಅಲ್ಲದೇ ರಾಜಕಾರಣಕ್ಕೆ ದೇವರ ಹೆಸರನ್ನು ಎಳೆದು ತಂದು ಸಂಸ್ಕಾರ ರಹಿತ ರಾಜಕಾರಣ ಮಾಡುತ್ತಿದ್ದಾರೆ. ದ.ಕ. ಜಿಲ್ಲೆಯ ಜನ ಬಿಜೆಪಿಯ ಕೋಮುವಾದದ ರಾಜಕೀಯವನ್ನು ತಿರಸ್ಕರಿಸುತ್ತಿದ್ದು ಶಾಂತಿಯನ್ನು ಬಯಸುವವರಾಗಿದ್ದಾರೆ. ಬಿಜೆಪಿಯ ಕೋಮು ಹಾಗು ರೈತ ವಿರೋಧಿ ನೀತಿಯನ್ನು ರಾಜ್ಯದ ಜನ ಬಲ್ಲವರಾಗಿದ್ದು ಕೇಂದ್ರ ಸರಕಾರದ ಜನ ವಿರೋಧಿ ನೀತಿಯನ್ನು ಮರೆ ಮಾಚುವ ಉದ್ದೇಶದಿಂದ ರಾಜ್ಯಾದ್ಯಂತ ಕೋಮು ಭಾವನೆ ಕೆರಳಿಸಿ ರಾಜಕೀಯ ಲಾಭವನ್ನು ಪಡೆಯಲು ಹವಣಿಸುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

Also Read  ಪ್ರಾಣಕ್ಕೆ ಕಂಟಕವಾದ ಮೀನು ಸಾಗಾಟದ ಲಾರಿ - ಮೀನಿನ ಬಾಕ್ಸ್ ಬಿದ್ದು ಸ್ಕೂಟರ್ ಸವಾರ ಮೃತ್ಯು..!

error: Content is protected !!
Scroll to Top