ವಿಧಾನ ಪರಿಷತ್ ಗೆ ಆಯ್ಕೆಯಾದ 3 ಶಾಸಕರ ಪ್ರಮಾಣ ವಚನ ಸ್ವೀಕಾರ

(ನ್ಯೂಸ್ ಕಡಬ) newskadaba.com ಬೆಂಗಳೂರು, ಜೂ. 03. ವಿಧಾನ ಪರಿಷತ್ತಿಗೆ ಅವಿರೋಧವಾಗಿ ಆಯ್ಕೆಯಾಗಿದ್ದ ಕಾಂಗ್ರೆಸ್ ಪಕ್ಷದ ಜಗದೀಶ್ ಶೆಟ್ಟರ್, ಎನ್.ಎಸ್.ಬೋಸರಾಜ್ ಹಾಗೂ ತಿಪ್ಪಣಪ್ಪ ಕಮಕನೂರು ಅವರು ಸೋಮವಾರದಂದು ಪ್ರಮಾಣವಚನ ಸ್ವೀಕರಿಸಿದ್ದಾರೆ.

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸೋಮವಾರದಂದು ನಡೆದ ಕಾರ್ಯಕ್ರಮದಲ್ಲಿ ಜಗದೀಶ ಶೆಟ್ಟರ್ ಮತ್ತು ಎನ್.ಎಸ್.ಭೋಸರಾಜು ಅವರು ಭಗವಂತನ ಹೆಸರಿನ ಮೇಲೆ ಹಾಗೂ ತಿಪ್ಪಣಪ್ಪ ಕಮಕನೂರು ಅವರು ಯಾನಾಗುಂದಿ ಮಾತಾ ಮಾಣಿಕೇಶ್ವರಿ ಹೆಸರಿನ ಮೇಲೆ ಪ್ರಮಾಣ ವಚನ ಸ್ವೀಕರಿಸಿದರು. ಇನ್ನು ಪ್ರಮಾಣ ವಚನದ ಬಳಿಕ ನೂತನ ಶಾಸಕರುಗಳಿಗೆ ಸಭಾಪತಿ ಬಸವರಾಜ ಹೊರಟ್ಟಿ ಅವರು ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪುಷ್ಪಗುಚ್ಛ ನೀಡಿ ಅಭಿನಂದಿಸಿದರು. ಇದೇ ಸಂದರ್ಭದಲ್ಲಿ ಸಭಾಪತಿಗಳು ನೂತನ ಶಾಸಕರಿಗೆ ಸದನದ ನಿಯಮಾವಳಿಗಳನ್ನು ಒಳಗೊಂಡ ಕಿಟ್ ಹಸ್ತಾಂತರಿಸಿದರು.

Also Read  ಸೈಬರ್ ಕ್ರೈಮ್- ಮಂಗಳೂರು: ಒಂದೇ ವರ್ಷದಲ್ಲಿ 11 ಕೋಟಿ ರೂ. ವಂಚನೆ
error: Content is protected !!
Scroll to Top