ಆಕಾಶದಲ್ಲೇ ಢಿಕ್ಕಿ ಹೊಡೆದು ಹೊತ್ತಿ ಉರಿದ ಯುದ್ದ ವಿಮಾನಗಳು

➤ ಫೈಲಟ್ ಗಳಿಬ್ಬರ ದುರ್ಮರಣ

(ನ್ಯೂಸ್ ಕಡಬ) newskadaba.com ಬೊಗೋಟಾ, ಜೂ. 03. ಕೊಲಂಬಿಯ ವಾಯುಪಡೆಯ 2 ಯುದ್ಧ ವಿಮಾನಗಳು ಹಾರಾಟದ ಸಂದರ್ಭದಲ್ಲಿ ಆಕಾಶದಲ್ಲೇ ಒಂದಕ್ಕೊಂದು ಡಿಕ್ಕಿ ಹೊಡೆದು ಹೊತ್ತಿ ಉರಿದು ಪತನಗೊಂಡಿದ್ದು, ಪರಿಣಾಮ ಇಬ್ಬರು ಪೈಲಟ್‌ಗಳು ಮೃತಪಟ್ಟಿರುವ ಕುರಿತು ವರದಿಯಾಗಿದೆ.

ಅಪಿಯಾಯ್‌ ವಾಯುನೆಲೆಯಲ್ಲಿ ನಡೆಯುತ್ತಿದ್ದ ತರಬೇತಿಯಲ್ಲಿ ಈ ಯುದ್ಧ ವಿಮಾನಗಳು ಭಾಗವಹಿಸಿದ್ದು, ವೃತ್ತಾಕಾರದಲ್ಲಿ ಹಾರಾಟ ನಡೆಸುತ್ತಿದ್ದವು. ಈ ವೇಳೆ ಟುಕಾನೋ ಟಿ-27ನ ಎರಡು ಯುದ್ಧ ವಿಮಾನಗಳು ಒಂದಕ್ಕೊಂದು ಡಿಕ್ಕಿಯಾಗಿ, ಬಳಿಕ ಕೆಲವೇ ಸೆಕೆಂಡ್ ಗಳಲ್ಲೇ ಆಕಾಶದಲ್ಲಿ ಹೊತ್ತಿ ಉರಿದಿವೆ. ಪರಿಣಾಮ ಎರಡೂ ಯುದ್ಧವಿಮಾನಗಳ ಪೈಲಟ್‌ಗಳು ಮೃತಪಟ್ಟಿದ್ದಾರೆ. ಘಟನೆ ಬಗ್ಗೆ ಕೊಲಂಬಿಯ ವಾಯುಪಡೆ ವಿಷಾದ ವ್ಯಕ್ತಪಡಿಸಿ, ಪೈಲಟ್‌ಗಳ ಸಾವಿಗೆ ಸಂತಾಪ ಸೂಚಿಸಿದೆ. ವಿಮಾನ ಪತನದ ದೃಶ್ಯಾವಳಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಜಾಲತಾಣದಲ್ಲಿ ವಿಡಿಯೋ ವೈರಲ್‌ ಆಗಿದೆ.

Also Read  ಏಣಿತ್ತಡ್ಕ : ಅಂಗನವಾಡಿ ಕೇಂದ್ರ ➤ 73ನೇ ವರ್ಷದ ಸ್ವಾತಂತ್ರ್ಯೋತ್ಸವ ದಿನಾಚರಣೆ
error: Content is protected !!
Scroll to Top