(ನ್ಯೂಸ್ ಕಡಬ)news kadaba.com ಪುತ್ತೂರು, ಜು. 3. ಮದುವೆಯ ಹಿಂದಿನ ದಿನವೇ ವರನ ತಂದೆ ನಾಪತ್ತೆಯಾಗಿರುವ ಘಟನೆ ಒಳಮೊಗ್ರು ಗ್ರಾಮದ ಕುಂಬ್ರದಲ್ಲಿ ನಡೆದಿದೆ.

ನಾಪತ್ತೆಯಾದ ನಿವಾಸಿ ಉಮ್ಮರ್ ಎಂಬವರು, ಜು.1ರಂದು ಮಧ್ಯಾಹ್ನ 3 ಗಂಟೆಯವರೆಗೆ ಪುತ್ತೂರಿನಲ್ಲಿದ್ದರು ಆ ಬಳಿಕ ನಾಪತ್ತೆಯಾಗಿದ್ದು, ಮೊಬೈಲ್ ಸ್ವಿಚ್ ಆಫ್ ಆಗಿದೆ.ಮಗನ ಮದುವೆ ಇಂದು ನಡೆಯಬೇಕಾಗಿತ್ತು. ನಿನ್ನೆ ಮದರಂಗಿ ಶಾಸ್ತ್ರ ನಿಗದಿಯಾಗಿತ್ತು. ಈಗ ತಂದೆ ನಾಪತ್ತೆಯಾಗಿರುವ ಕಾರಣ ಮದುವೆ ರದ್ದು ಮಾಡಲಾಗಿದೆ. ಮನೆಯವರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ, ಮೊಬೈಲ್ ಲೊಕೇಶನ್ ಆಧಾರದಲ್ಲಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.
