ಯುವತಿಯನ್ನು ಅಡ್ಡಗಟ್ಟಿ ಕಿರುಕುಳ ನೀಡಿದ ಯುವಕ

➤ ದೂರು ದಾಖಲು

(ನ್ಯೂಸ್ ಕಡಬ) newskadaba.com ಸುರತ್ಕಲ್, ಜು. 03. ಬೈಕಿನಲ್ಲಿ ಬಂದ ಅನ್ಯಕೋಮಿನ ಯುವಕನೋರ್ವ ಯುವತಿಯೋರ್ವಳನ್ನು ರಸ್ತೆ ಮಧ್ಯೆ ಅಡ್ಡಗಟ್ಟಿ ಚುಡಾಯಿಸಿ ಕಿರುಕುಳ ನೀಡಿ, ಹಣದ ಆಮಿಷ ತೋರಿಸಿ ನನ್ನ ಜತೆ ಬಾ ಎಂದು ಹೇಳಿ ಅನುಚಿತವಾಗಿ ವರ್ತಿಸಿದ ಘಟನೆ ಕೃಷ್ಣಾಪುರ 8 ಎ ಬ್ಲಾಕ್ ನಲ್ಲಿ ನಡೆದಿದೆ.

ಘಟನೆಯಿಂದ ಭಯಭೀತಳಾದ ಯುವತಿ ಕಿರುಚಿದಾಗ ಸ್ಥಳದಲ್ಲಿ ಸ್ಥಳೀಯರು ಜಮಾಯಿಸಿದ್ದು, ಇದನ್ನು ಕಂಡ ಯುವಕ ಸ್ಥಳದಿಂದ ಕಾಲ್ಕಿತ್ತಿದ್ದಾನೆ ಎನ್ನಲಾಗಿದೆ. ಈ ಕುರಿತು ಯುವತಿಯ ಮನೆಯವರು ಸುರತ್ಕಲ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸುರತ್ಕಲ್ ಪೊಲೀಸರು ಯುವಕನನ್ನು ಕರೆತಂದು ವಿಚಾರಣೆ ನಡೆಸುತ್ತಿದ್ದಾರೆ.

Also Read  breaking news ಕರಾವಳಿಯಲ್ಲಿ ರವಿವಾರ ಈದುಲ್ ಫಿತ್ರ್
error: Content is protected !!
Scroll to Top