(ನ್ಯೂಸ್ ಕಡಬ) newskadaba.com ಬ್ಯಾಂಕಾಕ್, ಜೂ. 30. ಖ್ಯಾತ ಬಾಡಿಬಿಲ್ಡರ್ ಜೋ ಲಿಂಡ್ನರ್ ಅವರು ನಿಧನರಾಗಿದ್ದಾರೆ.

ರಕ್ತನಾಳ ಸಮಸ್ಯೆಯಿಂದ ಬಳಲುತ್ತಿದ್ದ ಜೋ ಲಿಂಡ್ನರ್ ಅವರು ಶನಿವಾರದಂದು ನಿಧನರಾಗಿದ್ದಾರೆ ಎಂದು ಅವರ ಗೆಳತಿ ನಿಚಾ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. 2 ದಿನಗಳ ಹಿಂದೆ ಆರೋಗ್ಯಕರ ದೇಹದಾರ್ಢ್ಯ ಅಭ್ಯಾಸಗಳನ್ನು ರೂಡಿಸಿಕೊಳ್ಳಬೇಕು ಎಂದು ಕರೆ ನೀಡಿದ್ದ ಜೋ ಲಿಂಡ್ನರ್ ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಫಿಟ್ನೆಸ್ ಕುರಿತಂತೆ ಹಲವು ವಿಡಿಯೋಗಳನ್ನು ಹಂಚಿಕೊಂಡಿದ್ದರು.
