ಅಕ್ರಮ ಗಾಂಜಾ ಮಾರಾಟ ಪತ್ತೆ ► ನಾಲ್ವರು ಆರೋಪಿಗಳ ಬಂಧನ

(ನ್ಯೂಸ್ ಕಡಬ) newskadaba.com ಮಂಗಳೂರು, ಜ.25. ಮಾದಕ ವಸ್ತು ಗಾಂಜಾವನ್ನು ಅಕ್ರಮವಾಗಿ ಸಾಗಿಸುತ್ತಿದ್ದ ನಾಲ್ವರು ಆರೋಪಿಗಳನ್ನು ಉಳ್ಳಾಲ ಪೋಲಿಸರು ಬುಧವಾರದಂದು ಬಂಧಿಸಿದ್ದಾರೆ.

ಕೊಂಡಾಣ ಎಂಬಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿ ಮಂಜೇಶ್ವರದ ಬದಿಮಲೆ ಪಾತೂರು ನಿವಾಸಿ ಮುಹಮ್ಮದ್ ಮನ್ಸೂರ್ ಯಾನೆ ಮನ್ಸೂರ್ (20), ತಲಪಾಡಿ ಗ್ರಾಮದ ಮೇಗಿನ ಪಂಜಾಳ ನಿವಾಸಿ ಮುಹಮ್ಮದ್ ಅಶ್ರಫ್ (28), ಇರಾ ಗ್ರಾಮ ಬಾಳೆಪುಣಿ ಬಳಿಯ ನಿವಾಸಿಗಳಾದ ಉಮರ್ ಫಾರೂಕ್ (22) ಮತ್ತು ಸಿಯಾದ್ (24) ಎಂಬವರನ್ನು ಬಂಧಿಸಿದ್ದಾರೆ. ಆರೋಪಿಗಳಿಂದ 600 ಗ್ರಾಂ ತೂಕದ ಗಾಂಜಾ ಹಾಗೂ ಸಾಗಾಟಕ್ಕೆ ಬಳಸಿದ್ದ ಕಾರು ಸಹಿತ ಒಟ್ಟು 1,56,000 ರೂ. ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

Also Read  ಸಾರ್ವಜನಿಕ ಗಣೇಶೋತ್ಸವದಿಂದ ಹಿಂದೂ ಸಮಾಜ ಒಗ್ಗೂಡಿಸುವ ಕೆಲಸ- ಕ್ಯಾ. ಚೌಟ

error: Content is protected !!
Scroll to Top