ಕಡಬ: 40 ಕೆಜಿಯ ಆಡನ್ನು ನುಂಗಿದ ಹೆಬ್ಬಾವು ➤ ವೀಡಿಯೋ ವೈರಲ್

(ನ್ಯೂಸ್ ಕಡಬ) newskadaba.com ಕಡಬ, ಜೂ.27. ಭಾರೀ ಗಾತ್ರದ ಹೆಬ್ಬಾವು ಆಡೊಂದನ್ನು ನುಂಗಲು ವಿಫಲ ಯತ್ನ ನಡೆಸಿದ ಘಟನೆ ಕಡಬ ತಾಲೂಕಿನ ಮರ್ಧಾಳ ಸಮೀಪದ ಕೊಡೆಂಕಿರಿ ಎಂಬಲ್ಲಿ ಮಂಗಳವಾರ ಸಂಜೆ ನಡೆದಿದೆ.

ಐತ್ತೂರು ಗ್ರಾಮದ ಕೊಡೆಂಕೀರಿ ನಿವಾಸಿ ಜಾರ್ಜ್ ಕುಟ್ಟಿ ಎಂಬವರಿಗೆ ಸೇರಿದ ಸುಮಾರು 40 ಕೆಜಿ ತೂಕದ ಆಡನ್ನು ಹೆಬ್ಬಾವೊಂದು ಉರುಳು ಹಾಕಿಕೊಂಡು ನುಂಗಲು ಯತ್ನಿಸಿದೆ. ಸುಮಾರು ಒಂದು ಗಂಟೆಗಳ ಕಾಲ ಸೆಣಸಾಡಿದ ಹೆಬ್ಬಾವು ಆಡಿನ ತಲೆಯ ಭಾಗವನ್ನು ಮಾತ್ರ ನುಂಗಿದ್ದು, ಉಳಿದ ಭಾಗವನ್ನು ನುಂಗಲು ಸಾಧ್ಯವಾಗದೆ ವಿಫಲವಾಗಿದೆ. ಹೆಬ್ಬಾವಿನ ಉರುಳಿಗೆ ಸಿಲುಕಿದ ಆಡು ಹೊರಬರಲಾಗದೆ ಉಸಿರುಗಟ್ಟಿ ಪ್ರಾಣವನ್ನು ಕಳೆದುಕೊಂಡಿದೆ‌. ಕೊನೆಗೂ ಆಡನ್ನು ನುಂಗಲಾರದ ಹೆಬ್ಬಾವು ಆಡನ್ನು ಬಿಟ್ಟು ಪೊದೆಯೊಳಗೆ ಸೇರಿಕೊಂಡಿದೆ. ಸ್ಥಳೀಯರು ದೃಶ್ಯವನ್ನು ಸೆರೆಹಿಡಿದಿದ್ದು, ಇದೀಗ ವೈರಲ್ ಆಗಿದೆ.

Also Read  ಎಸ್ಡಿಪಿಐ ಬಡಗಜೆಕಾರು ಗ್ರಾಮ ಸಮಿತಿ ➤ ಗ್ರಾ.ಪಂ. ಚುನಾವಣಾ ಅಭ್ಯರ್ಥಿ ಘೋಷಣಾ ಕಾರ್ಯಕ್ರಮ
error: Content is protected !!
Scroll to Top